ಉ.ಕ ಸುದ್ದಿಜಾಲ ರಾಯಬಾಗ :

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಯಲ್ಲಿ ಶಿಕ್ಕರೊಬ್ಬರು ಭರತನಾಟ್ಯ ಮಾಡಿರುವ ವಿಡಿಯೋ ಒಂದು ಸದ್ಯ ವೈರಲ್ ಆಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ.

ಶಿಕ್ಷಕನ ಭರತ ನಾಟ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್

KHPS ಪ್ರಾಥಮಿಕ ಶಾಲೆ ನಾಶಿ ತೋಟ ಮುಗಳಖೋಡ ಶಾಲೆಯ ಶಿಕ್ಷಕ ಪರಶುರಾಮ್ ವಾಯ್ ಸರಸ್ವತಿ ಎನ್ನುವ ಶಿಕ್ಷ ಭರತ ನಾಟ್ಯ ಮಾಡಿರಿವ ವಿಡಿಯೋ ವೈರಲ್ ಆಗಿದೆ.

ನಧೀಂ ಧೀನ್ ತನ ಹಾಡು ಇತ್ತ ಸರ್ಕಾರಿ ಶಾಲೆ ಶಿಕ್ಷಕನಿಂದ ಅದ್ಭುತ ಭರತನಾಟ್ಯ ಪ್ರದರ್ಶನ. ನೆಚ್ಚಿನ ಶಿಕ್ಷಕನ ನೃತ್ಯ ನೋಡಿ ಕುಣಿದು ಕುಪ್ಪಳಿಸುತ್ತಿರುವ ಮದ್ದು ಮಕ್ಕಳು. ಈ ಅದ್ಭುತ ದೃಶ್ಯ ಕಂಡುಬಂದಿದ್ದು ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ.

ಮುಗಳಖೋಡ ಪಟ್ಟಣದಲ್ಲಿ ಸರ್ಕಾರಿ ಶಾಲೆಗಳ ಮಹತ್ವದ ಕಾರ್ಯಕ್ರಮ ಪ್ರತಿಭಾ ಕಾರಂಜಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆ ಶಿಕ್ಷಕರೋರ್ವರು ಮಾಡಿದ ಅದ್ಭುತ ಭರತನಾಟ್ಯ ಪ್ರದರ್ಶನ ಜನರ ಗಮನ ಸೆಳೆದಿದೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ “ ನಾಶಿ ತೋಟ ” ಸರ್ಕಾರಿ ಶಾಲೆ ಶಿಕ್ಷಕ ಪರಶುರಾಮ ವಾಯ್ ಸರಸ್ವತಿ ಎಂಬುವವರು ಮಾಡಿರುವ ಈ ಅದ್ಭುತ ಭರತನಾಟ್ಯ ಪ್ರದರ್ಶನದ ವೀಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಒಟ್ಟಿನಲ್ಲಿ ನಮ್ಮ ಸರ್ಕಾರಿ ಶಾಲೆಗಳು ಹಾಗೂ ಅಲ್ಲಿನ ಶಿಕ್ಷಕರ ಕಲಾತ್ಮಕ ಕೆಲಸ ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಎಂಬುದಂತು ಸ್ಪಷ್ಟ. ಮಕ್ಕಳಿಗೆ ವಿಭಿನ್ನ ರೀತಿಯಲ್ಲಿ ಮನರಂಜನೆ ನೀಡಿ ಅವರನ್ನು ರಂಜಿಸುವ ಇಂತಹ ಶಿಕ್ಷಕರ ಮತ್ತಷ್ಟು ಹೆಚ್ಚಾಗಲಿ.