ಉ.ಕ ಸುದ್ದಿಜಾಲ ಮೈಸೂರು :

ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸ್ಯಾಂಡಲ್ ವುಡ್ ಜೋಡಿ ಮದುವೆಗೆ ಗಣ್ಯಾತಿಗಣ್ಯರು ಶುಭ ಕೋರಿದರು.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿ ಹಸೆಮಣೆ ಏರಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಇಂದು ಸಿಂಹಪ್ರಿಯ ಜೋಡಿ ಮದುವೆಯಾದರು. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಸಿಂಹಪ್ರಿಯ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಮೈಸೂರಿನಲ್ಲಿ ವಿವಾಹವಾಗಿರುವ ಈ ಸಿಂಹಪ್ರಿಯ ಜೋಡಿಗೆ ಮದುವೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಗೆಳೆಯ ಡಾಲಿ ಧನಂಜಯ್ ಮತ್ತು ನಟಿ ಅಮೃತಾ, ರಾಜಕೀಯ ರಂಗದಿಂದ ಎಸ್.ಟಿ ಸೋಮಶೇಖರ್, ರಾಮ್ ದಾಸ್, ಪ್ರತಾಪ ಸಿಂಹ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದರು.