ಉ.ಕ ಸುದ್ದಿಜಾಲ ಬಾಗಲಕೋಟೆ :

ನಾನು ಇಂಜನಿಯಿರಿಂಗ್, ಗಿಂಜನಿಯರಿಂಗ್ ಬಿಟ್ಟು. ಹೊಲಮನೆ ಕೆಲಸ ಮಾಡಬೇಕಿತ್ತು. ಟ್ರ್ಯಾಕ್ಟರ್ ಓಡಿಸೋದು, ಹೊಲದಲ್ಲಿ ಕಳೆ ತೆಗೆಯೋದು ಸೇರುತ್ತದೆ. ಹೀಗೆ ಹೇಳಿದ್ದು ಇನ್ಫೋಸಿಸ್ ಒಡತಿ ಸುಧಾಮೂರ್ತಿ.

ಬಾಗಲಕೋಟೆ ನಗರದ ತೇಜಸ್ ಶಿಕ್ಷಣ ಸಂಸ್ಥೆಯಲ್ಲಿ ಇನ್ಫೋಸಿಸ್ ಫೌಂಡೇಶನ್ ಒಡತಿ ಸುಧಾಮೂರ್ತಿ ಸಂವಾದ. ನಿಮ್ಮ ಜೀವನದ ಗ್ರೇಟ್ ಮಿಸ್ಟೇಕ್ ಯಾವುದು ಅಂತ ನೇರವಾಗಿ ಕೇಳಿದ ವಿದ್ಯಾರ್ಥಿನಿ ಪ್ರಶ್ನೆಗೆ ಸುಧಮ್ಮ ಉತ್ತರ. ನಾನು ಗ್ರೇಟ್ ಮಿಸ್ಟೇಕ್ ಅಂತ ಯಾವುದು ಮಾಡಿಲ್ಲ.

ಒಮ್ಮೊಮ್ಮೆ ನನಗೆ ಅನ್ನಿಸಿದ್ದು ಕೋಟಿ ವಿದ್ಯಗಿಂತ ಮೇಟಿ ವಿದ್ಯ ಮೇಲು ಅಂತ. ನಾನು ಹೊಲಮನೆ ಮಾಡಬೇಕಿತ್ತು. ನನಗೆ ನೇಚರ್ ಜೊತೆ ಇರಲು ಬಹಳ ಇಷ್ಟ.

ಮಿಸ್ಟೇಕ್ ಅಂತ ಮಾಡಿದ್ದು ನೆನಪಿಗೆ ಬರ್ತಿಲ್ಲ. ಜೀವನದಲ್ಲಿ ಇದನ್ನು ಮಾಡಲೇಬಾರದಿತ್ತು ಅಂತ ಇವತ್ತಿಗೂ ಅನ್ನಿಸಿಲ್ಲ.