ಉ.ಕ ಸುದ್ದಿಜಾಲ ರಾಮನಗರ :
ನಾಯಿ ಮೇಲೆ ಚಿರತೆ ದಾಲಿ ಮಾಡಿದ್ದನ್ನ ನೋಡೊದರೆ ಮೈ ಜುಂ ಎನಿಸುತ್ತೆ. ಮನೆ ಮುಂಭಾಗ ಕಟ್ಟಿದ್ದ ನಾಯಿ ಮೇಲೆ ಚಿರತೆ ಅಟ್ಯಾಕ್ ಮಾಡಿರುವ ಘಟನೆ ರಾಮನಗರ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದ್ದು, ಆಟ್ಯಾಕ್ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ರಾಮನಗರದ ರಾಂಪುರ ಗ್ರಾಮದ ಗೋವಿಂದರಾಜು ಎಂಬುವವರಿಗೆ ಸೇರಿದ ಮನೆ ಮುಂದೆ ನಾಯಿಯನ್ನ ಕಟ್ಟಿ ಹಾಕಿದ್ದರು. ತಡರಾತ್ರಿ ಮನೆ ಬಳಿ ಬಂದ ಚಿರತೆ ನಾಯಿ ಹೊತ್ತೋಯಲು ಪ್ರಯತ್ನಿಸಿದೆ. ಈ ವೇಳೆ ಚಿರತೆ ಜೊತೆ ನಾಯಿ ಸೆಣಸಿ ಗೆದ್ದು ಬೀಗಿದೆ.
ಚಿರತೆ ದಾಳಿಯಿಂದ ಎಸ್ಕೇಪ್ ಆದ ನಾಯಿ ತನ್ನ ಪ್ರಾಣ ಉಳಿಯಿತು ಎಂದು ನಿಟ್ಟುಸಿರು ಬಿಟ್ಟಿದೆ. ಇನ್ನೂ ರಾಮನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಪದೇ ಪದೇ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಜನರು ಆತಂಕದಲ್ಲಿದ್ದಾರೆ. ಇನ್ನಾದರೂ ಕೂಡ ಅರಣ್ಯ ಇಲಾಖಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೇಂದು ಜನರು ಆಗ್ರಹಿಸಿದ್ದಾರೆ.