ಬೆಳಗಾವಿ :

ಬೆಳಗಾವಿ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರು ಮುಂಬದಿಯ ಲಾರಿಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿಯ ವಿರಪನ ಕೊಪ್ಪ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಮಂಗಳವಾರ ಸಂಭವಿಸಿದ ಭೀಕರ ಅಪಘಾತಕ್ಕೆ ಮೂವರು  ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮೂಲದವರು. ಧಾರವಾಡ ಕಡೆಯಿಂದ ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಮೂಲದ ಇವರೆಲ್ಲ ಬೆಳಗಾವಿಗೆ ಆಸ್ಪತ್ರೆಗೆಂದು ಬರುತ್ತಿದ್ದರು ಎನ್ನಲಾಗಿದೆ . ವಾಸಿಂ ಖಾನ್ ( 40 ), ಸೈಯದ್ ಇಸ್ಮಾಯಿಲ್ ದಾವುದ್ ( 65 ), ಸುಶೀಲಾ ಫರ್ನಾಂಡಿಸ್ ( 60 ) ಮೃತಪಟ್ಟವರು. ಜಾವೇದ್ ( 41 ) ಹಾಗೂ ಮುಕ್ತಿಯಾರ್ ಸಯ್ಯದ್ ( 60 ) ತೀವ್ರ ಗಾಯಗೊಂಡಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. ಹಿರೆಬಾಗೇವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.