ಉ.ಕ ಸುದ್ದಿಜಾಲ ನಿಪ್ಪಾಣಿ :

ಖಾಸಗಿ ಬಸ್‌‌ನಲ್ಲಿ ಯಾವುದೇ ದಾಖಲೆ ಇಲ್ಲದೇ ಒಂದುವರೆ ಕೋಟಿ ನಗದನ್ನು ಮುಂಬೈನಿಂದ ಕುಮಟಾದತ್ತ ಆನಂದ ಟ್ರಾವೆಲರ್ಸ್‌‌ ‌ಸಂಚರಿಸುತ್ತಿದ್ದ ವ್ಯಕ್ತಿಯನ್ನ ಬಂದಿಸಿದ ನಿಪ್ಪಾಣಿ ಗ್ರಾಮೀಣ ಪೋಲಿಸರು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೋಳಿ ಚಕ್ ಪೋಸ್ಟ ಬಳಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೊಗನೋಳ ಬಳಿ ಚಕ್ ಪೋಸ್ಟ ನಿರ್ಮಾಣ ಮಾಡಲಾಗಿದ್ದು ಪ್ರತಿಯೊಂದು ವಾಹನ ತಪಾಸಣೆ ಮಾಡುವಂತ ಸಂಧರ್ಭದಲ್ಲಿ ಆನಂದ ಟ್ರಾವೆಲರ್ಸ್‌‌‌ನಲ್ಲಿ ಮುಂಬೈನಿಂದ ಕುಮಟಾದತ್ತ ಬರುತ್ತಿದ್ದ ಖಾಸಗಿ ಬಸ್ ನಲ್ಲಿ ದಾಖಲೆ ಇಲ್ಲದ ಹಣ ಕೊಂಡೊಯುತ್ತಿದ್ದ ವ್ಯಕ್ತಿ.

ನಿಪ್ಪಾಣಿಯಲ್ಲಿ ದಾಖಲೆ ಇಲ್ಲದ ಹಣ ಸೀಜ್ ಮಾಡಲಾಗಿದ್ದು, ಕೊಗನೊಳಿ ಚಕ್ ಪೋಸ್ಟ ಬಳಿ ಹಣ ಜಪ್ತಿ ಮಾಡಲಾಗಿದೆ. ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು.