ಉ.ಕ ಸುದ್ದಿಜಾಲ ಅಥಣಿ :

ದಿನದಿಂದ ದಿನಕ್ಕೆ ಅಥಣಿ ಬಿಜೆಪಿ‌ ಟಿಕೇಟ್ ಬಗ್ಗೆ ಬಾರಿ ಗೊಂದಲ ಸೃಷ್ಠಿ ಮಾಡಿದ್ದು ದಿನಂಪ್ರತಿ‌ ಮಾಧ್ಯಮಗಳು ಟಿಕೇಟ್ ಗೊಂದಲದ ಬಗ್ಗೆ ಚರ್ಚೆ ಮಾಡುತ್ತಲೇ ಇವೆ. ನಿನ್ನೆ ಅಥಣಿ ಪಟ್ಟಣದಲ್ಲಿ ನಡೆದ ಪಂಚಮಸಾಲಿ ಸಭೆಯಲ್ಲಿ ಮಾಜಿ ಡಿಸಿಎಂ ಸವದಿ ಅಥಣು ಟಿಕೇಟ್ ವಿಚರವಾಗಿ ಮಾತನಾಡಿದ್ದಾರೆ.

ಅಥಣಿ ಕ್ಷೇತ್ರಗಳ ವಿದ್ಯಮಾನಗಳು ದಿನನಿತ್ಯ ಟಿವಿಯಲ್ಲಿ ನೊಡುತಿದ್ದೀರಿ ದಿನನಿತ್ಯ ಅಥಣಿ ಸುದ್ದಿ ಬರ್ತಾ ಇದೆ.  ಒಂದು ಕುಮಠಳ್ಳಿ ಹೆಸರು, ಒಂದು ಸವದಿ ಹೆಸರು ಬರುತ್ತೇ. ಯಾರಿಗೆ ಟಿಕೆಟ್ ಎಂಬುದು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ‌

ನಮ್ಮದು ರಾಷ್ಟ್ರೀಯ ಪಕ್ಷ ಇದರಿಂದ ಅವರು ತಿರ್ಮಾನ ಮಾಡುತ್ತಾರೆ. ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಎರಡು ದಿನಗಳ ಕಾಲ ಪ್ರತಿ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಒಂದು ಕ್ಷೇತ್ರಕ್ಕೆ ಮೂರು ಅಭ್ಯರ್ಥಿಗಳು ಎಂದು ಪಟ್ಟಿ ಸಿದ್ದ ಮಾಡಲಾಗಿದೆ. ಸಿಎಂ ಅವರು ಆ ಪಟ್ಟಿಯನ್ನು ದೆಹಲಿಗೆ ಕಳಿಸುತ್ತಾರೆ. ನಿನ್ನೆ ಸಭೆ ಮುಗದಿದೆ ಎಂದರು.

ಅಥಣಿ ಬಿಜೆಪಿ ಟಿಕೇಟ್ ವಿಚಾರ ಲಕ್ಷ್ಮಣ ಸವದಿ ಭಾಷಣ

ಮಹೇಶ್ ಕುಮಠಳ್ಳಿ ಸೋಲಿನ ವಾತಾವರಣ ನಿರ್ಮಾಣವಾಗಿದೆ. ಈ ಸೋಲನ್ನು ನನ್ನ ಹಣೆ ಪಟ್ಟೆಗೆ ಕಟ್ಟುವುದಕ್ಕೆ ನನ್ನ ಜಿಲ್ಲೆಯಲ್ಲಿ ಕೆಲವರು ಇದ್ದಾರೆ. ಪಕ್ಷಕ್ಕೆ ಅಭ್ಯರ್ಥಿಗಳ ಸೋಲು ಬೇಡಾ ನನ್ಗೆ ಟಿಕೆಟ್ ಕೊಡಿ ನಾನು ಗೆಲ್ಲುತ್ತೇನೆ ಎಂದು ಕೇಳಿದ್ದೇನೆ. ಆ ಕೊರ ಕಮಿಟಿಯಲ್ಲಿ ಈ ಎಲ್ಲಾ ವಿಚಾರಗಳು ಹೇಳಿದ್ದೇನೆ ಎಂದರು.

ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬುದನ್ನು ಕಾಯಬೇಕು ಎಂದು ಹೇಳಿದ್ದಾರೆ. ನಾನು ಬಿಜೆಪಿಯಲ್ಲಿ ಇದ್ದುಕೊಂಡು ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ನನ್ನ ಸಿದ್ದಾಂತ ವಿಚಾರಕ್ಕೆ ವಿರುದ್ಧ ಇರುವ ಬೇರೆ ಬೇರೆ ಜಿಲ್ಲೆಗಳ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದೇನೆ. ನನ್ನ ಪಕ್ಷ ನನಗೆ ಮೋಸ ಮಾಡುವುದಿಲ್ಲ ಎಂದು ತಿಳಿದಿದ್ದೇನೆ.

ಪಂಚಮಸಾಲಿ ಸಮಾಜ ಯಾವತ್ತೂ ನನ್ನ ಜೊತೆ ಇದೆ‌. ಅವರ ಜೊತೆಗೆ ನಾನು ಯಾವತ್ತೂ ಇರುತ್ತೆ. ಪಂಚಮಸಾಲಿ ಮೀಸಲಾತಿಗ ವಿಚಾರದಲ್ಲಿ ಶ್ರೀಗಳಿಗೆ ಅಂದೆ ನಾನು ಮಾತು ನೀಡಿದ್ದೆ. ಪಂ.ಸ ಮೀಸಲಾತಿ ವಿಚಾರವಾಗಿ ಕ್ಯಾಬಿನೆಟ್ ನಡೆದಿತ್ತು. ಆ ಸಭೆಯಲ್ಲಿ ಹಲವಾರು ಸಲಹೆ ನೀಡಿದ್ದೆ.

ಆದರೆ ಲಕ್ಷ್ಮಣ್ ಸವದಿ ಸಮಾಜದ ಮೀಸಲಾತಿ ವಿಚಾರದಲ್ಲಿ ವಿರೋಧ ಮಾಡಿದ್ದಾರೆ ಎಂದು ಶ್ರೀಗಳಿಗೆ ಹೇಳಿದರು. ಶ್ರೀಗಳು ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನು ಯಾವತ್ತೂ ಪಂ.ಚ ಮೀಸಲಾತಿಗಾಗಿ ದ್ವನಿ ಎತ್ತಿದವನು ನಾನೇ.

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಹೇಳಿದವನು ನಾನು. ಅಥಣಿ ಶಿವಯೋಗಿಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನು ಈ ಸಮಾಜಕ್ಕೆ ಮೀಸಲಾತಿ ವಿಚಾರದಲ್ಲಿ ವಿರೋಧ ಮಾಡಿಲ್ಲ. ನನಗೆ 99% ನನಗೆ ಪಕ್ಷ ಟಿಕೆಟ್ ಕೊಡುತ್ತದೆ. ನಾನು ಸ್ವತಂತ್ರ್ಯವಾಗಿ ಚುನಾವಣೆ ನಿಲ್ಲವ ವಾತಾವರಣ ಬರುವುದಿಲ್ಲ.

ನಮ್ಮ ನಾಯಕರಿಗೆ ಏನು ಹೇಳಬೇಕು ಹೇಳಿದ್ದೇನೆ. ಪಕ್ಷ ಪ್ರಾಮಾಣಿಕ ಕಾರ್ಯಕರ್ತರನ್ನು ಕೈ ಬಿಡುವದಿಲ್ಲ ಎಂದು ನಂಬಿಕೆ ಇದೆ. ಕಾಂಗ್ರೆಸ್ ನವರು ಗೆಲುವಿನ ಹುಮ್ಮಸ್ಸಿನಲ್ಲಿ ಇದ್ದಾರೆ. ನನ್ನ ವಿಧಾನಪರಿಷತ್ ಅವಧಿಯನ್ನು ಕುಮಠಳ್ಳಿಗೆ ಕೊಡಿ ಎಂದು ಕೇಳಿದ್ದೇನೆ. ಹತ್ತನೇ ತಾರೀಕು ಒಂದು ನಿರ್ಣಯ ಬರಲಾಗುತ್ತಿದ ಎಂದರು.