ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಕುಡಗೋಲಿನಿಂದ ಮನಬಂದಂತೆ ಕೊಚ್ಚಿ 27ವರ್ಷದ ಯುವಕನ ಭೀಕರ ಹತ್ಯೆ! ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ಪುಲಗಡ್ಡಿ ಗ್ರಾಮದ ರಾಮಪ್ಪ ಬಸವಂತಪ್ಪ ಕೌಜಲಗಿ (27) ಕೊಲೆಯಾದವ, ಸಿದ್ದಪ್ಪ ಮಲ್ಲಪ್ಪ ಕೌಜಲಗಿ(24) ಕೊಲೆ ಮಾಡಿದ ಆರೋಪಿ ಗದ್ದೆಯಲ್ಲಿ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕುಡಗೋಲಿನಿಂದ ಕೊಚ್ಚಿ ಭೀಕರ ಹತ್ಯೆ.
ಜಮೀನಿಗೆ ನೀರು ಹಾಯಿಸುವ ವಿಚಾರಕ್ಕೆ ರಾಮಪ್ಪ ಕೌಜಲಗಿ ಮತ್ತು ಸಿದ್ದಪ್ಪನ ನಡುವೆ ಗಲಾಟೆ ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಸಿದ್ದಪ್ಪ ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ರಾಮಪ್ಪನನ್ನು ಕೊಚ್ಚಿ ಕೊಲೆ ಜಗಳ ಬಿಡಿಸಲು ಬಂದ ರಾಮಪ್ಪನ ತಂದೆ ಬಸವಂತಪ್ಪನ ಮೇಲೆಯೂ ದಾಳಿ ನಡೆಸಿದ ಸಿದ್ದಪ್ಪ
ಗಂಭೀರ ಗಾಯಗೊಂಡ ಬಸವಂತಪ್ಪ ಗೋಕಾಕ ಖಾಸಗಿ ಆಸ್ಪತ್ರೆಗೆ ರವಾನೆ ಇನ್ನೂ ಕೊಲೆ ಮಾಡಿ ತಾನೇ ಮೂಡಲಗಿ ಪೊಲೀಸ ಠಾಣೆಗೆ ಶರಣಾದ ಆರೋಪಿ ಸಿದ್ದಪ್ಪ ಬಘಟನಾ ಸ್ಥಳಕ್ಕೆ ಡಿವೈಎಸ್ಪಿ ದೂದಪೀರ್ ಮುಲ್ಲಾ, ಸಿಪಿಐ ಶ್ರೀಶೈಲ್ ಬ್ಯಾಕೋಡ, ಪಿಎಸ್ಐ ರಾಜು ಪೊಜೇರಿ ಭೇಟಿ,ಪರಿಶೀಲನೆಬಮೂಡಲಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.