ಉ.ಕ ಸುದ್ದಿಜಾಲ ಮೋಳೆ :

ಶಿಕ್ಷಣ ರಂಗದಲ್ಲಿ ಕಾಂತ್ರಿ ಮಾಡಲು ಮುಂದಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರು ಕಾಗವಾಡ ತಾಲೂಕಿನ ಮೋಳೆ ಹಾಗೂ ಕಾತ್ರಾಳ ಗ್ರಾಮದಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟನೆ ಮಾಡಿದರು.

ಶಾಲಾ ಕೊಠಡಿ ಉದ್ಘಾಟನೆ ಬಳಿಕ‌ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು ಸಚಿವ ಸ್ಥಾನ ಕೊಡ್ರಿ ಅಂತಾ ನಾನು ಭಿಕ್ಷೆ ಬೇಡುವುದಿಲ್ಲ. ತಿರುಗಿ ತಿರುಗಿ ಕೇಳುವುದು ಸರಿಯಲ್ಲ. ಸಚಿವ ಸಂಪುಟ ಸ್ಥಾನಮಾನ ಹೈಕಮಾಂಡಿಗೆ ಬಿಟ್ಟಿದ್ದು, ಸಚಿವ ಸ್ಥಾನ ನೀಡಿದರೆ ರಾಜ್ಯದಲ್ಲಿ ಒಳ್ಳೆಯ ಕಾರ್ಯ ಮಾಡುತ್ತೇನೆ ಆರು ತಿಂಗಳ ಹಿಂದೆ ಮಾತುಕತೆಯಾಗಿದೆ ಎಂದು ಹೇಳಿದರು.

ಕರಾವಳಿಯಲ್ಲಿ ನಡೆಯುತ್ತಿರುವ ಹಿಜಾಬ್ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ನಾನು ಸದ್ಯ ಮಾತನಾಡುವುದು ಸರಿಯಾಗುವುದಿಲ್ಲ ಹಿಜಾಬ್ ವಿಷಯದಲ್ಲಿ ಹಗುರವಾಗಿ ಜಾರಿಕೊಂಡ ಶಾಸಕ ಶ್ರೀಮಂತ ಪಾಟೀಲ