ಉ.ಕ ಸುದ್ದಿಜಾಲ ಕೃಷ್ಣಾ ಕಿತ್ತೂರ :

ತಲವಾರ ಹಿಡಿದುಕೊಂಡು ಕಳ್ಳತನಕ್ಕೆ ಬಂದ ಖತರ್ನಾಕ್ ಗ್ಯಾಂಗ್, ಹತ್ತಕ್ಕೂ ಹೆಚ್ಚು ಮನೆಗಳಿಂದ ಲಕ್ಷಾಂತರ ಹಣ ದೊಚಿದ ಕಳ್ಳ ಖದೀಮರ ಗ್ಯಾಂಗ್. ತಲವಾರ್ ಹಿಡಿದುಕೊಂಡು ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದಲ್ಲಿ ನಸುಕಿನ ವೇಳೆ ಈ ಘಟನೆ ನಡೆದಿದೆ‌. ಸುಮಾರು ರಾತ್ರಿ ಒಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸುಮಾರು ಐದ ಲಕ್ಷಕ್ಕೂ ಅಧಿಕ ಹಣ ಹಾಗೂ ಬೆಲೆ ಬಾಳುವ ಬಂಗಾರ ದೊಚ್ಚಿದ ಕಳ್ಳರು ಸುಮಾರು ಐದಕ್ಕೂ ಹೆಚ್ಚು ಮನೆ ಒಂದು ದೇವಸ್ಥಾನ ಹಾಗೂ ಒಂದು ಬ್ಯಾಂಕ‌ ಕಳ್ಳತನ ಮಾಡಿದ ಕಳ್ಳರು.

ರಾತ್ರಿ ಎರಡು ಗಂಟೆ ಸುಮಾರಿಗೆ ಕಳ್ಳತನ‌ ನಡೆದಿದ್ದು ಕಳ್ಳತನಕ್ಕೆ ಸುಮಾರು ಏಳು ಜನರು ಕಳ್ಳರು ಕೃಷ್ಣಾ ಕಿತ್ತೂರ ಗ್ರಾಮಕ್ಕೆ ಆಗಮಿಸಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳತನ ಸಮಯದಲ್ಲಿ ಗ್ರಾಮಸ್ಥರನ್ನ  ಕಂಡು ಪರಾರಿಯಾದ ಕಳ್ಳರು. ಕಳ್ಳರಿದ್ದಾರೆ ಎಂದ ಗೊತ್ತಾಗುತ್ತಿದ್ದಂತೆ ಬೆನ್ನು ಹತ್ತಿದ ಗ್ರಾಮಸ್ಥರು. ಗ್ರಾಮಸ್ಥರ ಕೈಗೆ ಸಿಗದೆ ಕಬ್ಬಿನ ಗದ್ದೆಯಲ್ಲಿ ಪರಾರಿ. ಕಳ್ಳರ ಎರಡು ಬೈಕ ವಶಪಡಿಸಿಕೊಂಡ ಗ್ರಾಮಸ್ಥರು.

ಮನೆ ಕಳ್ಳತನ ಮಾಡುತ್ತಿರುವ ವಿಡಿಯೋ

ಹೆಚ್ಚುವರಿ ಪೋಲಿಸ್ ಉಪಾಧೀಕ್ಷಕರಾದ ಮಹಾನಿಂಗ್ ನಂದಗಾಂವಿ ಭೇಟಿ ನೀಡಿದ್ದಾರೆ. ಡಾಗ್ ಸ್ಕಾಡ್ ಮೂಲಕ ಪರೀಶಿಲ ನಡೆಸಿದ್ದಾರೆ. ಈ ಒಂದು ಘಟನೆ  ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ‌. ಕಳೆದ ಎರಡು ತಿಂಗಳ ಹಿಂದೆ ಕೂಡಾ ಗಡಿ ಭಾಗದಲ್ಲಿ ಕಳ್ಳತನ ಪ್ರಕರಣಗಳು‌ ನಡೆದಿವೆ. ಆದಷ್ಟು ಬೇಗ ಪೋಲಿಸರು ಕಳ್ಳರನ್ನು ಬೇದಿಸುವಲ್ಲಿ ಯಶಸ್ವಿಯಾಗಲಿ‌ ಎಂದು ಕೃಷ್ಣಾ ಕಿತ್ತೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ.