ಉ‌.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಎಂಇಎಸ್ ಮುಖಂಡನ ಮುಖಕ್ಕೆ‌ ಮಸಿ ಬಳಿದ ಪ್ರಕರಣ ಬಂಧಿತ ನಾಲ್ವರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಿಂಡಲಗಾ ಜೈಲಿನಿಂದ ಬಿಡುಗಡೆ.

ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಪತ್‌ಕುಮಾರ್ ದೇಸಾಯಿ ಅನಿಲ್ ದಡ್ಡಿಮ‌ನಿ, ಸಚೀನ ಮಠದ, ರಾಹುಲ್ ಕಲಕಾಂಬಕರ್ ಬಿಡುಗಡೆ. ಜೈಲಿನಿಂದ ಬಿಡುಗಡೆಯಾದ ನಾಲ್ವರು ಕನ್ನಡಪರ ಸಂಘಟನೆ ಕಾರ್ಯಕರ್ತರಿಗೆ ಸನ್ಮಾನ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್‌ರಿಂದ ಸನ್ಮಾನ, ಹಿಂಡಲಗಾ ಜೈಲಿನ ಎದುರು ನಾಲ್ವರು ಕಾರ್ಯಕರ್ತರಿಗೆ ಸನ್ಮಾನ.

ಬಿಳಿ ಬಣ್ಣದ ಶರ್ಟ್, ಪಂಚೆ ತೊಡಿಸಿ ಮೈಸೂರು ಪೇಟಾ ಹಾಕಿ, ಶಾಲು ಹೊದಿಸಿ ಸನ್ಮಾನ ಡಿಸೆಂಬರ್ 13ರಂದು ಬೆಳಗಾವಿಯಲ್ಲಿ ಮಹಾಮೇಳ ನಡೆಸಿದ್ದ ಎಂಇಎಸ್ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದಿದ್ದನ್ನು ವಿರೋಧಿಸಿ ಮಹಾಮೇಳ‌ ನಡೆಸಿದ್ದ ಎಂಇಎಸ್ ಪುಂಡರು ಮಹಾಮೇಳ ನಡೆಯುವ ಸ್ಥಳಕ್ಕೆ ನುಗ್ಗಿ ಎಂಇಎಸ್ ಅಧ್ಯಕ್ಷನ ಮುಖಕ್ಕೆ ಮಸಿ ಬಳೆಯಲಾಗಿತ್ತು. ಎಂಇಎಸ್ ಅಧ್ಯಕ್ಷ ದೀಪಕ್ ಧಳವಿ ಮುಖಕ್ಕೆ ಮಸಿ ಬಳಿದಿದ್ದ ಕನ್ನಡಪರ ಕಾರ್ಯಕರ್ತರು. ಮಸಿ ಬಳಿದ ಕನ್ನಡಪರ ಕಾರ್ಯಕರ್ತರ ವಿರುದ್ಧ ಕೊಲೆಯತ್ನ ಕೇಸ್ ದಾಖಲಾಗಿತ್ತು.