ಉ.ಕ ಸುದ್ದಿಜಾಲ ಅಥಣಿ :
ನಮ್ಮ ಪೀಡಾ ಹೋಗಿದೆ. ಲಕ್ಷ್ಮಣ್ ಸವದಿಗೆ ಪೀಡಾ ಎಂದು ಆಕ್ರೋಶ. ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಸವದಿ ವಿರುದ್ಧ ಗುದ್ದು. ಬಿದ್ದವರಿಗೆ ಪಕ್ಷ ಡಿಸಿಎಂ ಮಾಡಿತ್ತು.
ಆದರೆ ಅವನು ಪಕ್ಷ ನಿಷ್ಠೆ ಮಾಡ್ಲಿಲ್ಲ ಎಂದು ರಮೇಶ ಜಾರಕಿಹೋಳಿ ಲಕ್ಷ್ಮಣ ಸವದಿ ವಿರುದ್ದ ಹರಿಹಾಯ್ದಿದ್ದಾರೆ.
ಅಥಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ. ಸಭೆ ಉದ್ದೇಶಿಸಿ ಅಥಣಿ ಶಿವಣಗಿ ಕಾರ್ಯಾಲಯದಲ್ಲಿ ರಮೇಶ್ ಜಾರಕಿಹೊಳಿ ಭಾಷಣ. ಇವತ್ತು ನಮ್ಮ ಬಿಟ್ಟು ಲಕ್ಷ್ಮಣ ಸವದಿ ಹೋಗಿದ್ದಾನೆ ನಮಗೆ ಚಲು ಆಯ್ತು. ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಹೋಗುತ್ತಾನೆ ಎಂದು ಸವದಿ ತಲೆಯಲ್ಲಿ ಇತ್ತು. ಆದರೆ ನನಗೆ ಮಂತ್ರಿ ಸ್ಥಾನ ಇಲ್ಲದಿದ್ದರೂ ನಾನು ಪಕ್ಷದಲ್ಲೇ ಇದ್ದೇ. ಇವತ್ತು ನನಗೆ ಸಂತೋಷವಾಗಿದೆ.
ಉದ್ದ ಅಂಗಿ ಹಾಕಿರುವನು ಹೋಗಿದ್ದಾನೆ. ನನಗೆ ಇವತ್ತು ತುಂಬಾ ಸಂತೋಷವಾಗಿದೆ. ಮಹೇಶ್ ಕುಮಠಳ್ಳಿ ಅವರನ್ನು ಗೆಲ್ಲಿಸಬೇಕು ನೀವು. ಸವಳು ಜವಳು ಈ ವರ್ಷ ಕಾಮಗಾರಿಗೆ ಮಾಡಲಾಗುವುದು. ಒಂದು ವರ್ಷ ಮಂತ್ರಿ ಇದ್ದರು ಅಥಣಿ ಅಭಿವೃದ್ಧಿಗೆ ಏನೂ ಮಾಡ್ಲಿಲ್ಲ ಸವದಿ. ತುಂಬಾ ನೀಜ ಇದ್ದಾನೆ.
ನಾನು ಅಥಣಿಯಲ್ಲಿ ಇರುತ್ತೇನೆ ಹಾಗೂ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಇರುತ್ತೇನೆ. ನೀವು ನನಗೆ ಶಕ್ತಿ ಆಗಬೇಕು. ಲಕ್ಷ್ಮಣ್ ಸವದಿ ಸೋಲಬೇಕು. ಬಿಜೆಪಿ ವರಿಷ್ಠರು ನನ್ನ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ವರಿಷ್ಠರು ನನ್ನ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ.
ಉದ್ದ ಅಂಗಿವನ್ನು ಮನೆಗೆ ಕಳಿಸುವುದು ನೀವು. ಯಾವುದೇ ದಬ್ಬಾಳಿಕೆ ಅಂಜಬೇಡಿ. ಅಥಣಿ ಕ್ಷೇತ್ರದಲ್ಲಿ ನಾನು ಬರುತ್ತೇನೆ.
ಇಷ್ಟುದಿನ ಲಕ್ಷ್ಮಣ್ ಸವದಿ ನಮ್ಮ ಪಕ್ಷದಲ್ಲಿ ಇದ್ದಾ ನಾನು ಸುಮ್ಮನೆ ಇದ್ದೇ. ಇನ್ನು ಮೇಲೆ ನಾನು ಇಲ್ಲೇ ಇರುತ್ತೇನೆ.
ಕೆಲವು ಸೊಸೈಟಿಯಲ್ಲಿ ಅಕ್ರಮವಾಗಿದೆ. ನಾವು ಅಧಿಕಾರಕ್ಕೆ ಬಂದು ಪರಿಶೀಲನೆ ಮಾಡಲಾಗುವುದು.
ರೈತರು ನೀವು ಯಾವುದಕ್ಕೂ ಹೆದರಬೇಡಿ. ನಿಮ್ಮ ಜೊತೆ ನಾನು ಯಾವತ್ತೂ ಇರುತ್ತೇನೆ. ಕೃಷ್ಣಾ ನದಿಯಲ್ಲಿ ನೀರುವಬಿಡುವಂತೆ ನೋಡಿಕೊಳ್ಳಲಾಗುವುದು. ಎರಡು ಟಿಎಂಸಿ ನೀರು ಪ್ರತಿ ಬೇಸಿಗೆಯಲ್ಲಿ ನೀರು ಬಿಡುಗಡೆ ಮಾಡಲಾಗುವುದು.
ವಿದ್ಯುತ್ ಸಮಸ್ಯೆ ಹೋಗಲಾಡಿಸಲಾಗುವದು. ಉಪ ಚುನಾವಣೆ ಸಮಯದಲ್ಲಿ ನಾಟಕ ಮಾಡಿದ್ದಾನೆ. ಆದರೆ ಈ ಬಾರಿ ಏನು ನಡೆಯುವುದಿಲ್ಲ. ಅವನು ಹೋಗಿರುವುದು ಛಲೋ ಆಗಿದೆ. ಅಥಣಿ ಕಾಗವಾಡ ಅಭ್ಯರ್ಥಿ ಗೆಲ್ಲಬೇಕು.
ನಿಮ್ಮ ಪರವಾಗಿ ನಾನು ಇದ್ದೇನೆ. ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಹೇಳಿಕೆ.