ಉ.ಕ ಸುದ್ದಿಜಾಲ ಅಥಣಿ :
ಗುರಗಳೆಂದರೆ ದೇವರ ಸಮಾನ, ಪ್ರತಿಯೊಂದು ಶಿಕ್ಷಣ ಸಂಸ್ಥೆಯು ಎಲ್ಲ ವಿದ್ಯಾರ್ಥಿಗಳ ಜೀವನವನ್ನು ರೂಪಿಸುತ್ತವೆ ಅಂತಹ ತಾವು ಕಲಿತ ಶಿಕ್ಷಣ ಸಂಸ್ಥೆಗೆ ಸಹಾಯ ಮಾಡಿದ ಪ್ರಯುಕ್ತ ಇಂದು ಅವರ ಹೆಸರನ್ನೇ ಶಿಕ್ಷಣ ಸಂಸ್ಥೆಗೆ ಇಡುತ್ತಿರುವುದು ಗುರು-ಶಿಷ್ಯ ಪರಂಪರೆಗೆ ಒಂದು ಹೆಮ್ಮೆಯಾಗಿದೆ ಎಂದು ಅನುಪಮ ರುಣವಾಲ ಅವರು ಹೇಳಿದರು.
ಅವರು ಸ್ಥಳೀಯ ಜೆ ಎ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಆಚರಣೆ ಅಂಗವಾಗಿ ಘೋಷಣೆಯಾದ ಆಂಗ್ಲ ಮಾಧ್ಯಮ ಶಾಲೆಗೆ ಶ್ರೀ ಪ್ರತಾಪ ಜಾಧವಜಿ ಭಾಟೆ ಇವರ ಸ್ಮರಣಾರ್ಥ ನಾಮಕರಣ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ ಸಂಸ್ಥೆಯ ಏಳಿಗೆ ಹಾಗೂ ದಾನಗಳಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆಯನ್ನು ಮಾಡಿ ಸಂಸ್ಥೆಗೆ ತಮ್ಮದೆಯಾದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಅಂತವರಲ್ಗಲಿ ಭಾಟೆ ಮನೆತನ ಪ್ರಮುಖವಾದ್ದು ಎಲ್ಲ ವಿದುಆರ್ಥಿಗಳು ಭಾಟೆ ಮನೆತನವನ್ನು ಸದಾಕಾಲ ನೆನೆಪಿನಲ್ಲಿ ಇಡಬೇಕಾಗಿದೆ ಎಂದರು.
ನಂತರ ಉಪಸ್ಥಿತರಾದ ಕಾಮಾಕ್ಷಿ ಬಾಟೆ ಅವರು ಮಾತನಾಡುತ್ತಾ ನಮ್ಮ ತಂದೆಯ ಶಿಕ್ಷಣ ಪ್ರೇಮ, ಪರಿಸರದ ಮೇಲೆ ಇರುವ ಪ್ರೀತಿ ಈ ಸಂಸ್ಥೆಯ ಜೊತೆಗೆ ಸಂಬAಧವನ್ನು ಗಟ್ಟಿಗೊಳಿಸಿದೆ ಅವರು ಈ ಸಂಸ್ಥೆಯ ಮೇಲಿನ ಪ್ರೇಮದಿಂದ ಸಂಸ್ಥೆ ಅವರ ಹೆಸರನ್ನು ಇಟ್ಟಿದೆ ಈ ಸಂಸ್ಥೆಗೆ ಧನ್ಯವಾದಗಳು ಎಂದರು.
ಅನಂತರ ಸುಧೀಂದ್ರ ಕುಲಕರ್ಣಿ ಅವರು ಮಾತನಾಡುತ್ತಾ ತಮ್ಮ ಬಾಲ್ಯದ ಜೀವನ, ಶಿಕ್ಷಕರನ್ನು ಸ್ಮರಿಸಿ ಎಲ್ಲರಿಗೂ ಅಭಿನಂದನೆ ಅರ್ಪಿಸಿದರು. ನಂತರ ತಪಸ ಕುಲಕರ್ಣಿ, ಅಧ್ಯಕ್ಷತೆ ವಹಿಸಿದ್ದ ಡಾ ರಾಮ ಕುಲಕರ್ಣಿ ಅವರು ಮಾತನಾಡಿದರು.
ಅನಂತರ ಮಧ್ಯಾಹ್ನ ರಾಷ್ಟ್ರೀಯ ಶಿಕ್ಷಣ ನೀತಿ ವಿಷಯದ ಕುರಿತು ಅನುಪಮಜೀ ರುಣವಾಲ ಅವರು ಉಪನ್ಯಾಸ ನೀಡಿದರು. ಈ ವೇಳೆ ಅರವಿಂದರಾದ ದೇಶಪಾಂಡೆ, ಸಂಜೀವ ಪಾಟೀಲ, ಡಾ ಪ್ರಮೋದ ಮಿರಜ, ಬಿ ಎ ಕಟ್ಟಿ, ಎಸ್ ವಿ ಜೋಶಿ, ಸಂದೀಪ ಸಂಗೋರಾಮ, ಆರ್ ಬಿ ದೇಶಪಾಂಡೆ, ಎಮ್ ವಿ ಜೋಶಿ, ಅನೀಲ ದೇಶಪಾಂಡೆ, ಎಲ್ ವಿ ಕುಲಕರ್ಣಿ, ಸಂಜೀವ ಕುಲಕರ್ಣಿ, ಆರ್ ಎ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.