ಉ.ಕ ಸುದ್ದಿಜಾಲ ರಾಯಚೂರು :

ಹೆತ್ತ ಮಗುವನ್ನೇ ಕೊಂದು 3 ದಿನ ಕಲ್ಲಿನ‌ ಪೊಟರೆಯಲ್ಲಿ ಮುಚ್ಚಿಟ್ಟ ಪಾಪಿ ತಂದೆ. ಮತ್ತೊಂದು ಮದುವೆಯಾಗುವ ಆಸೆಯಿಂದ ಮಗು ಕೊಂದ ಪಾಪಿ ತಂದೆ ಇಂತದೊಂದು ಘಟನೆ ರಾಯಚೂರು ಜಿಲ್ಲೆಯ ಮುದಗಲ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಮನಕುಲಕುವ ಘಟನೆ ನಡೆದಿದೆ.

ಮೃತ ಮಗು ಅಭಿನವ 14 ತಿಂಗಳ ಕೂಸು, ಮಹಾಂತೇಶ್ (32) ಹಂತಕ ತಂದೆ ಪರ ಪುರುಷನೊಂದಿಗೆ ಪತ್ನಿ ಅನೈತಿಕ‌ ಸಂಬಂಧ ವಿಷಯ ತಿಳಿದು ಮತ್ತೊಂದು ಮದುವೆಗೆ‌ ತಯಾರಿ ನಡೆಸಿದ್ದ ಪತಿ ಮಹಾಂತೇಶ.

ಮರು ಮದುವೆಗೆ ಮಗು ಅಡ್ಡಿಯಾಗುತ್ತೆ ಎಂದು ಮಗುವನ್ನ ಹತ್ಯೆ ಮಾಡಲಾಗಿದೆ‌. ಹತ್ಯೆ ನಡೆದ ಮೂರು ದಿನಗಳ ಬಳಿಕ ಪತ್ತೆ ಹಂತಕ ತಂದೆಯನ್ನ ಬಂಧಿಸಿದ ಪೊಲೀಸರು. ಪೊಲೀಸರಿಗೆ ಮೊದಲು ಮಗುವನ್ನು ಸುಟ್ಟು ಹಾಕಿರುವುದಾಗಿ ಮಾಹಿತಿ ಹೇಳಿದ ಆರೋಪಿ ಮಹಾಂತೇಶ.

ಲಾಠಿ ರುಚಿ ತೋರಿಸಿದ ಬಳಿಕ ಮುಚ್ಚಿಟ್ಟ ಮಗುವಿನ ಬಗ್ಗೆ ಹೇಳಿಕೆ ನೀಡಿದ ಮಹಾಂತೇಶ ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.