ಉ.ಕ ಸುದ್ದಿಜಾಲ ಚಿಕ್ಕೋಡಿ :

ಕಾರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಇಬ್ಬರು ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದ ಬಳಿ ನಡೆದಿದೆ.

ಅಪಘಾತದಲ್ಲಿ ಅಣ್ಣ- ತಂಗಿ ದುರ್ಮರಣ ಹೊಂದಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರು ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ನಿವಾಸಿಗಳು. ಪ್ರಶಾಂತ ನಾಗರಾಜ ತುಳಸಿಕಟ್ಟಿ (21), ಪ್ರಿಯಾಂಕ ನಾಗರಾಜ ತುಳಸಿಕಟ್ಟಿ (19) ಮೃತ ದುರ್ದೈವಿಗಳು.

ಬೆಳಗಾವಿಯಿಂದ ಸದಲಗಾದತ್ತ ತೆರಳುತ್ತಿದ್ದ ಕಾರು, ಸದಲಗಾದಿಂದ ಚಿಕ್ಕೋಡಿಯತ್ತ ಆಗಮಿಸುತ್ತಿದ್ದ ದ್ವಿಚಕ್ರವಾಹನ ಮಧ್ಯೆ ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಣ್ಣ, ತಂಗಿ ಇಬ್ಬರನ್ನೂ ಕೊಲ್ಹಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು

ಕೊಲ್ಹಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅಣ್ಣ ತಂಗಿ ಸಾವನಪ್ಪಿದ್ದಾರೆ. ಈ ಅಪಘಾತ ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.