ಉ.ಕ ಸುದ್ದಿಜಾಲ ಹುಬ್ಬಳ್ಳಿ :

ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ತನಗೆ ಕಚ್ಚಿದ ಹಾವನ್ನು ಕೊಂದು ಚೀಲದಲ್ಲಿ ಹಾಕಿ ಯುವಕ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ಘಟನೆ ಹುಬ್ಬಳ್ಳಿಯ ಇಂಗಳಗಿ ಗ್ರಾಮದಲ್ಲಿ ನಡೆದಿದೆ.

ತಂದೆಯೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಹಾವು ಕಚ್ಚಿದ್ದು, ಕೂಡಲೇ ಹಾವನ್ನು ಹಿಡಿದುಕೊಂಡು ಯುವಕ‌ ಹಾಗೂ ಆತನ ತಂದೆ ಆಸ್ಪತ್ರೆಗೆ ಬಂದ ಘಟನೆ ಬುಧವಾರ ಸಂಜೆ ಇಂಗಳಗಿ ಗ್ರಾಮದಲ್ಲಿ ನಡೆಯಿತು. ಇಂಗಳಗಿ ಗ್ರಾಮದ ಫಕೀರಪ್ಪ ಅಣ್ಣಿಗೇರಿ ಹಾವು ಕಡಿತಕ್ಕೊಳಗಾದವ.

ತಂದೆಯೊಂದಿಗೆ ಶೇಂಗಾ ಕೀಳಲು ಹೋಗಿದ್ದಾಗ ಯುವಕನಿಗೆ ಹಾವು ಕಚ್ಚಿದೆ. ಕೂಡಲೇ ಹಾವಿನ ತಲೆ ಜಜ್ಜಿ ಕೊಂದು ಹಾಕಿದ್ದಾನೆ. ನಂತರ ತಂದೆಯ ಜೊತೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಯುವಕನ ತಂದೆ ಈರಪ್ಪ ಅಣ್ಣಿಗೇರಿ ಪ್ರತಿಕ್ರಿಯಿಸಿ, “ಹೊಲದಲ್ಲಿ ಕೆಲಸ ಮಾಡುವಾಗ ಮಗನಿಗೆ ಹಾವು ಕಚ್ಚಿತು. ಕೂಡಲೇ ಹಾವನ್ನು ಜಜ್ಜಿ ಹಾಕಿ ಕೊಂದು ಚೀಲದಲ್ಲಿ ಹಾಕಿಕೊಂಡು ಬಂದು ವೈದ್ಯರಿಗೆ ತೋರಿಸಿದ್ದಾನೆ. ಆಗ ವೈದ್ಯರು ಹೊರ ಹಾಕಲು ಹೇಳಿದರು.

ಅದು ಚಿಣಗೇನ ಹಾವು. ಮಗ ವೈದ್ಯರಿಗೆ ಹಾವನ್ನು ತೋರಿಸಿ, ಇದೇ ಹಾವು ಕಚ್ಚಿದೆ, ಚಿಕಿತ್ಸೆ ಕೊಡಿ ಎಂದು ದಾಖಲಾಗಿದ್ದಾನೆ” ಎಂದು ಹೇಳಿದರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ.