ಉ.ಕ ಸುದ್ದಿಜಾಲ ಚಿತ್ರದುರ್ಗ :
1 ಲಕ್ಷದ 25 ಸಾವಿರ ರೂ. ಬೆಲೆ ಬಾಳುವ ಒಡವೆಳಿದ್ದ ಬ್ಯಾಗ್ ಅನ್ನು ಕಳ್ಳರು ಕದ್ದೊಯ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದ ಮುಖ್ಯ ವೃತ್ತದಲ್ಲಿರುವ ಸಂದ್ಯಾದೀಪ ಬಂಗಾರದ ಅಂಗಡಿಯಲ್ಲಿ ನಡೆದಿದೆ.
ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಟ್ಟಣದ ಸುಮಿತ್ರ ಬಂಗಾರದ ಒಡವೆಗಳನ್ನು ಕಳೆದುಕೊಂಡ ಮಹಿಳೆಯಾಗಿದ್ದಾರೆ. ಕಳೆದ ಅ.15 ರಂದು ಬಂಗಾರದ ಒಡವೆಗಳಿದ್ದ ಬ್ಯಾಗ್ ಅನ್ನು ಬಂಗಾರದ ಅಂಗಡಿಯ ಟೇಬಲ್ ಮೇಲೆ ಇಟ್ಟು ಹೊಸ ಬಗೆಯ ಒಡುವೆಗಳನ್ನು ನೋಡುತ್ತಿದ್ದಾರೆ.
ಬಂಗಾರ ನೀಡಿ ಹೊಸ ಬಂಗಾರವನ್ನು ಖರೀದಿಸಲು ಬಂದಿದ್ದ ಮಹಿಳೆಯೊಬ್ಬರಿಂದ ಸುಮಾರು 1 ಲಕ್ಷದ 25 ಸಾವಿರ ರೂ. ಕಳ್ಳತನವಾಗಿದೆ. ಈ ವೇಳೆ ಗ್ರಾಹಕರ ಸೋಗಿನಲ್ಲಿ ಮಹಿಳೆಯೊಬ್ಬಳು ಒಬ್ಬ ಬಾಲಕನನ್ನು ಕರೆದುಕೊಂಡು ಅಂಗಡಿಗೆ ಬಂದಿದ್ದಾಳೆ. ಆ ಬಾಲಕನ ಮೂಲಕ ಬಂಗಾರದ ಒಡವೆಗಳಿದ್ದ ಬ್ಯಾಗ್ ಅನ್ನು ಕಳ್ಳತನ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ತಕ್ಷಣ ಬ್ಯಾಗ್ ಇಲ್ಲದಿದ್ದಾಗ ಅಂಗಡಿ ಮಾಲೀಕರನ್ನು ವಿಚಾರಿಸಿದ್ದಾರೆ.
ಎಲ್ಲಿಯು ಸಿಗದಿದ್ದಾಗ ಹೊಳಲ್ಕೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. 12 ಗ್ರಾಂ ತೂಕದ ಬಂಗಾರದ ಚೈನ್, 4 ಗ್ರಾಂ ತೂಕದ ಉಂಗುರ, 5 ಗ್ರಾಂ ತೂಕದ ಜುಮುಕಿ, 3 ಗ್ರಾಂ ತೂಕದ ಕಿವಿ ಸುತ್ತು, 30 ಗ್ರಾಂ ತೂಕದ ಬೆಳ್ಳಿಯ ಕಾಲು ಚೈನ್ ಸೇರಿ ಒಟ್ಟು 1,25,00 ರೂ. ಬೆಲೆ ಬಾಳುವ ಒಡುವೆಗಳು ಕಳವಾಗಿದ್ದವು. ಸಿಸಿಟಿವಿ ದೃಶ್ಯ ಆಧರಿಸಿ ಕಳ್ಳಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.