ಉ.ಕ ಸುದ್ದಿಜಾಲ ವಿಜಯಪುರ :
ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುವಾಗ ದುರ್ಘಟನೆ. ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ಸಹೋದರರು ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಡೆದಿದೆ.
ಬಾಬಾನಗರದ ನಿವಾಸಿಗಳಾದ ಶ್ರೀಕಾಂತ್ ವಿಜಾಪುರ (29), ರಾಜಕುಮಾರ್ ವಿಜಾಪುರ (31) ಮೃತ ಸಹೋದರರು. ಟಿಸಿಯಿಂದ ಬೋರ್ವೆಲ್ ಗೆ ವಿದ್ಯುತ್ ತಂತಿ ಎಳೆಯಲಾಗಿತ್ತು.ಬವೈರ್ ಗೆ ದ್ರಾಕ್ಷಿ ಕಬ್ಬಿಣದ ಎಂಗಲ್ ಸುತ್ತಿದ್ದರು.. ಎಂಗಲ್ ಬಳಿ ವಿದ್ಯುತ್ ತಂತಿ ಕಟ್ ಆಗಿ ದ್ರಾಕ್ಷಿ ಸಾಲುಗಳಿಗೆ ಹಾಕಿದ ತಂತಿ ಹಾಗು ಎಂಗಲ್ ಗೆ ವಿದ್ಯುತ್ ಪ್ರವಹಿಸಿದೆ.
ದ್ರಾಕ್ಷಿ ತೋಟದಲ್ಲಿ ತಮ್ಮ ಶ್ರೀಕಾಂತ್ ಕೆಲಸ ಮಾಡುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಕೆಳಗೆ ಬಿದ್ದಿದ್ದಾನೆ.ವಅಣ್ಣ ರಾಜಕುಮಾರ್ ಸಹೋದರ ಬಿದ್ದಿರೋದು ನೋಡಿ ರಕ್ಷಿಸಲು ಹೋಗಿ ವಿದ್ಯುತ್ ತಗುಲಿ ಇಬ್ಬರು ಸಾವನಪ್ಪಿದ್ದು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಬಾಬಾನಗರದಲ್ಲಿ ಸಹೋದರಿಬ್ಬರ ಸಾವಿನಿಂದ ನೀರವ ಮೌನ, ಹೃದಯವಿದ್ರಾವಕ ಘಟನೆ ನಡೆದಿದ್ದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಸಂತಾಪ ಸೂಚಿಸಿದ್ದಾರೆ. ಫೇಸ್ಬುಕ್ ಅಕೌಂಟ್ ನಲ್ಲಿ ಸಹೋದರಿಬ್ಬರ ಫೋಟೋ ಹಾಕಿ ಸಚಿವ ಎಂಬಿ ಪಾಟೀಲ್ ಸಂತಾಪ.
