ಉ.ಕ ಸುದ್ದಿಜಾಲ ಬೆಳಗಾವಿ :
ಬೈಲಹೊಂಗಲದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ. ನ್ಯಾಯಾಂಗ ವ್ಯವಸ್ಥೆ ಏನ್ ನಿರ್ದೇಶಕ ಕೊಡಬೇಕು ಕೊಟ್ಟಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲು.
ಸಿದ್ದರಾಮಯ್ಯ ಎ1 ಎಂದು ಎಫ್ ಐ ಆರ್ ಆಗಿದೆ. ತನಿಖೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಆಗಬೇಕು. ಒತ್ತಡ ಮಣಿಯದೇ ತನಿಖೆ ಆಗಬೇಕು ಅಂದ್ರೆ ಸಿಎಂ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ಹಿತ ಚಿಂತನಕನಾಗಿ ಹೇಳಬೇಕು ಅಂದ್ರೆ. ಗೌರವಯುತವಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು.
ಮತ್ತೆ ನ್ಯಾಯಾಲಯ ತೀರ್ಪು ಬಂದ ಬಳಿಕ ಮತ್ತೆ ಸಿಎಂ ಆಗಿ. ಚಿಲ್ಲರೇ ರಾಜಕಾಣಿಗಳ ರೀತಿ ನೀವು ಮಾಡಬೇಡಿ. ನಿಮ್ಮ ಸುತ್ತಮುತ್ತಲಿನ ಪಟಾಲಂ ನಿಂದ ತಪ್ಪು ಸಲಹೆ. ಇದರಿಂದ ಇಷ್ಟು ವರ್ಷಗಳ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ.
ನಿಮ್ಮಗೆ ಒಳ್ಳೆಯ ಅವಕಾಶ ಇದೆ. ನೀವು ಗೌರವಯುತವಾಗಿ ರಾಜಕೀಯ ಕೊಡಿ. ಸಿದ್ದರಾಮಯ್ಯ ಬಿಟ್ಟರೆ ಶಕ್ತಿಯುತ ನಾಯಕ ಕಾಂಗ್ರೆಸ್ ನಲ್ಲಿ ಯಾರು ಇಲ್ಲ. ನೀವೆ ಹಾಳು ಮಾಡಿಕೊಳ್ಳುತ್ತೀದಿರಿ.
ನಿಮ್ಮ ಹಿಂದು ವಿರೋಧಿ ನೀತಿ. ಕುಂಕುಮ, ಪೇಠ ಸುತ್ತಿಕೊಳ್ಳಲು ನಿಮಗೆ ಅಪಮಾನ ಆಗುತ್ತೆ. ಈಗ ಹೋಗಿ ಚಾಮುಂಡಿ ತಾಯಿ ದರ್ಶನ್ ಪಡಿಯುತ್ತೀರಿ. ನಿಮ್ಮ ಹೆಸರು ಉಳಿಯಬೇಕು ಅಂದರೆ ತಕ್ಷಣ ರಾಜೀನಾಮೆ ಕೊಡಿ.
ಆಗದೇ ವಿಧಾನಸಭೆ ವಿಸಯ ಮಾಡಿ. ಕಾಂಗ್ರೆಸ್ ನಲ್ಲಿ ಇರೋವಂತರು ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡಿದ್ದಾರೆ. ಖರ್ಗೆ ವಿರುದ್ಧ ದಾಖಲೆ ತೆಗದವರು ಯಾರು. ಮೂಲ ಕಾಂಗ್ರೆಸ್ ಪಕ್ಷದಲ್ಲಿ ಇದೆ. ಬಿಜೆಪಿಯವರು ಇದನ್ನು ಸಮರ್ಥವಾಗಿ ಹೋರಾಟ ಮಾಡಿದೆ. ಅದರ ಫಲವಾಗಿ ಸಿದ್ದರಾಮಯ್ಯಗೆ ಈ ಸ್ಥಿತಿ ಬಂದಿದೆ.
ಯತ್ನಾಳ್, ಜಾರಕಿಹೊಳಿ ಉಚ್ಚಾಟನೆಗೆ ರೇಣುಕಾಚಾರ್ಯ ಆಗ್ರಹ ವಿಚಾರವಾಗಿ ಪ್ರತೀಕ್ರಿಯಿಸಿದ ಅವರು ಇಬ್ಬರನ್ನು ಮೊದಲು ಉಚ್ಚಾಟನೆ ಮಾಡಬೇಕು. ದುಡ್ಡು ತೊಗೊಂಡು ಶಾಮನೂರು ಮಲ್ಲಿಕಾರ್ಜುನ ಪರ ಚುನಾವಣೆ ಮಾಡಿದ್ದಾನೆ.
ರೇಣುಕಾಚಾರ್ಯನನ್ನು ಮೊದಲು ಉಚ್ಛಾಟನೆ ಮಾಡಬೇಕು. ಅವನೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾನೆ. ಅದೇ ಒಂದು ದೊಡ್ಡ ತಲೆ ನೋವು ಪಕ್ಷದಲ್ಲಿ ಇದೆ ಎಂದರು.