ಉ.ಕ‌ ಸುದ್ದಿಜಾಲ ಮೋಳೆ :

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಚುನಾವಣೆ ಇಂದು ಬೆಳಿಗ್ಗೆ ನಡೆದಿದ್ದು ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ನೇಮಕ‌ಮಾಡಲಾಗಿದೆ.

ಮೋಳೆ ಗ್ರಾಮದ ಕಟ್ಟಡ ಕಾರ್ಮಿಕ ಸಂಘದಲ್ಲಿ ಒಟ್ಟು 600 ಕಾರ್ಮಿಕ ಸದಸ್ಯರಿದ್ದು ಇಂದು‌ ನಡೆದ ಆಡಳಿತ ‌ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪರಶುರಾಮ ಹರಳೆ ಉಪಾಧ್ಯಕ್ಷರಾಗಿ ಮಹಾದೇವ ಭಡಕೆ ಪ್ರಧಾಮ ಕಾರ್ಯದರ್ಶಿಯಾಗಿ ಸಂತೋಷ ಮಿರ್ಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.