ಉ.ಕ ಸುದ್ದಿಜಾಲ ಬೆಳಗಾವಿ :

ಯಲ್ಲಮ್ಮದೇವಿ ದೇವಸ್ಥಾನಕ್ಕೆ ಹೊರಟಿದ್ದ ಯಾತ್ರಾರ್ಥಿಗಳ ವಾಹನ ಪಲ್ಟಿ ವಿಚಾರವಾಗಿ ರಾಮದುರ್ಗದಲ್ಲಿ ಎಸ್ಪಿ ಡಾ.ಸಂಜೀವ ಪಾಟೀಲ ಹೇಳಿಕೆ ನೀಡಿದ್ದಾರೆ.

ರಾಮದುರ್ಗ ದಲ್ಲಿ ಹುಲಕುಂದ ಗ್ರಾಮದ ಯಲ್ಲಮ್ಮ ದೇವಿ ದರ್ಶನಕ್ಕೆ ತೆರಳಿದ್ದರು. ಆಗ ತಾವು ತಂದ ಪುತ್ತಿ ತೆಗೆದು ಕಟಕೋಳ ಗ್ರಾಮದಲ್ಲಿ ಊಟ ಮಾಡಿ, ಅಲ್ಲಿಂದ ಪ್ರಯಾಣ ಬೆಳೆಸಿ ಕಟಕೋಳ ಬಳಿಯ ಚೂಂಚನೂರ ಗ್ರಾಮದ ರಸ್ತೆ ಪಕ್ಕದಲ್ಲಿನ ಮರಕ್ಕೆ ಡಿಕ್ಕಿ ಹೊಡೆಯಲಾಗಿದೆ‌.

ಅಪಘಾತದಲ್ಲಿ ಐದು ಜನ ಸ್ಥಳದಲ್ಲೇ ಸಾವು ಮತ್ತೊಬ್ಬರು ಗೋಕಾಕ ಆಸ್ಪತ್ರೆ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ. 16ಜನರಿಗೆ ಗಾಯ, ಅವರನ್ನು ಗೋಕಾಕ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮೃತರೆಲ್ಲರೂ ಹುಲಕುಂದ ಗ್ರಾಮದವರಾಗಿದ್ದಾರೆ.

ಬೆಳಗಾವಿ ಎಸ್ಪಿ ಸಂಜೀವ ಪಾಟೀಲ

ತಾಯಿ ಮಗಳು ಒಂದೇ ಕುಟುಂಬದವರು. ಚಾಲಕ ಪರಾರಿ ಆಗಿದ್ದಾನೆ,ಕುಡಿದು ವಾಹನ ಚಾಲನೆ ಮಾಡಿದ ಬಗ್ಗೆ ತನಿಖೆ ನಡೆದಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದ ಬೆಳಗಾವಿ ಎಸ್ಪಿ ಸಂಜೀವ ಪಾಟೀಲ.