ಉ.ಕ ಸುದ್ದಿಜಾಲ ದಾವಣಗೆರೆ :
ಮಕರ ಸಂಕ್ರಮಣ ದಿನವೇ ಬೀಕರ ರಸ್ತೆ ಅಪಘಾತ, ಭೀಕರ ರಸ್ತೆ ದುರಂತ ಎಳು ಜನರ ಸಾವು ಇನ್ನೋವಾ ಕಾರ್ ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಎಳು ಜನ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಈ ಧಾರುಣ ಘಟನೆ ನಡೆದಿದೆ
ಆರು ಜನ ಸ್ಥಳದಲ್ಲಿಯೇ ಸಾವನಪ್ಪಿದ್ದು, ಓರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನಪ್ಪಿದ್ದಾನೆ. ಸ್ಥಳಕ್ಕೆ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಭೇಟಿ ಪರಿಶೀಲನೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪೊಲೀಸರಿಂದ ಮೃತರ ಗುರುತು ಪತ್ತೆ ಮಾಡಲಾಗಿದ್ದು, ಮೃತ ಪಟ್ಟ 7 ಜನರು ಕೂಡ ಯವಕರು. ಮಲ್ಲನಗೌಡ (22), ಸಂತೋಷ (21), ಸಂಜೀವ್ (20), ಜಬೀಮ್ (18), ರಘು (23), ಸಿದ್ದೇಶ್ (20), ವೇದಮೂರ್ತಿ (18), ಮೃತರಲ್ಲಿ 4 ಜನ ಯಾದಗಿರಿ ಜಿಲ್ಲೆಯ ಸುರಪುರದವರು ಇಬ್ಬರು ವಿಜನಗರ, ವಿಜಯಪುರದ ಒಬ್ಬ ಸಾವು. ಬೆಂಗಳೂರಿನಿಂದ ಹೊಸಪೇಟೆ ಕಡೆ ಹೊರಟಿದ್ದ ಇಂಡಿಕಾ ಕಾರ್ ಈ ವೇಳೆ ಡಿವೈಡರ್ ಗೆ ಗುದ್ದಿ ಸಾವನ್ನಪ್ಪಿದ ಯುವಕರು. ಜಗಳೂರು ತಾಲೂಕಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.