ಉ.ಕ ಸುದ್ದಿಜಾಲ ಗದಗ :
ಬಸ್ ನ ಟೈರ್ ಬ್ಲಾಸ್ಟ್, ಮಹಿಳೆ ಕಾಲು ಕಟ್ ಹುಬ್ಬಳ್ಳಿ- ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯ ಹಳ್ಳಿಗುಡಿ ಬಳಿ ಘಟನೆ. ಗದಗ ನಗರದಿಂದ ಗಂಗಾವತಿ ಪಟ್ಟಣಕ್ಕೆ ತೆರಳುತ್ತಿದ್ದ KSRTC ಬಸ್..
ಬಸ್ ವೇಗವಾಗಿ ಸಂಚರಿಸುತ್ತಿರುವಾಗ ಏಕಾಏಕಿ ಹಿಂದಿನ ಚಕ್ರದ ಟೈರ್ ಬ್ಲಾಸ್ಟ್. ಈ ವೇಳೆ ಹಿಂಬದಿ ಸೀಟ್ ನಲ್ಲಿ ಕೂತಿದ್ದ ಮಹಿಳೆ ಕಾಲಿಗೆ ಗಂಭೀರ ಗಾಯ. ಟೈರ್ ಬ್ಲಾಸ್ಟ್ ಆದ ಚಕ್ರದ ಮೇಲಿನ, ಒಳಗಡೆ ಸೀಟ್ ನಲ್ಲಿ ಕೂತಿದ್ದ ಮಹಿಳೆ..
ಬ್ಲಾಸ್ಟ್ ಆದ ರಭಸಕ್ಕೆ ಬಸ್ ನ ಒಳಗಡೆ ಕೂತಿದ್ದ ಮಹಿಳೆ ಕಾಲಿಗೆ ಗಂಭೀರ ಗಾಯ.ಅದೃಷ್ಟವಶಾತ್ ಸ್ವಲ್ಪದರಲ್ಲೇ ತಪ್ಪಿದ ಅನಾಹುತ..ಉಳಿದೆಲ್ಲ ಪ್ರಯಾಣಿಕರು ಬಚಾವ್. ಮಹಿಳೆಯನ್ನ ಅಂಬ್ಯುಲೆನ್ಸ್ ಮೂಲಕ ಗದಗ ಜೀಮ್ಸ್ ಆಸ್ಪತ್ರೆಗೆ ದಾಖಲು
ಕೊಪ್ಪಳ ಡಿಪೋ ಗೆ ಸೇರಿದ KA 37 F0854 ಸಂಖ್ಯೆಯ ಸಾರಿಗೆ ಸಂಸ್ಥೆಯ ಬಸ್. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.