ಉ.ಕ ಸುದ್ದಿಜಾಲ ರಾಯಬಾಗ :

ಟ್ರೈನ್ ಹರಿದು ಹದಿನಾರು ಕುರಿಗಳ ದುರ್ಮರಣ ಹೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ‌.

ಚಿಂಚಲಿ ಪಟ್ಟಣದ ರೈಲು ನಿಲ್ದಾಣದ ಕೊಂಚ ದೂರದಲ್ಲಿರೋ ಗೇಟ್ ಬಳಿ ಈ ಘಟನೆ ನಡೆದಿದ್ದು, ಜೋದಪುರ್ ರೈಲಿಗೆ ಅಡ್ಡ ಬಂದು 16 ಕುರಿಗಳು ಸಾವನಪ್ಪಿದ್ದು, ವಸಂತ ಜಾವೇದಾರ್ ಎಂಬುವವರಿಗೆ ಸೇರಿದ್ದ ಕುರಿಗಳು. ರೈಲು ಬರುತ್ತಿರುವುದನ್ನು ಗಮನಿಸದೇ ಕುರಿಗಳನ್ನು ಬಿಟ್ಟಿದಕ್ಕೆ ಜರುಗಿದ ಅವಘಡ. ಕುರಿಗಳನ್ನು ಕಳೆದುಕೊಂಡು ರೋಧಿಸುತ್ತಿರುವ ಮಾಲೀಕ.

ಕೆಲ ಕುರಿಗಳಿಗೆ ಗಾಯಗಳಾಗಿವೆ. ರೈಲು ಬೆಳಗಾವಿಯಿಂದ ಮೀರಜ್ ಕಡೆಗೆ ಹೊರಟಾಗ ಈ ಘಟನೆ ನಡೆದಿದೆ. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.