ಚಿಕ್ಕೋಡಿ :

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ತಾಲೂಕಿನ ರೈತರು ಸೇರಿಕೊಂಡು ಕೇಂದ್ರ ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ವಾಪಸ ಪಡೆದದ್ದನ್ನು ಸ್ವಾಗತಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ ರೈತರು.

ರೈತ ಹೋರಾಟಗಾರಿಗೆ ಶುಭ ಕೋರಿ ಸುಪ್ರೀಂ ಕೋರ್ಟ್ ಇನ್ನೂ ಮುಂದೆ ಈ ಕಾಯಿದೆಯನ್ನು ಯಾವುದೇ ಸರ್ಕಾರ ಬಂದರೂ ಜಾರಿ ಗೊಳಿಸಬಾರದು ಮತ್ತು ಸರ್ಕಾರ ರೈತರ ಪರವಾಗಿ ಕೆಲಸ ಮಾಡಬೇಕು ರೈತರ ವಿರುದ್ಧ ನಡೆದರೆ ಮನೆಗೆ ಕಳಿಸಿಕೊಡುವ ಕೆಲಸ ರೈತ ಸಂಘ ಹಾಗೂ ಎಲ್ಲಾ ರೈತರು ಸೇರಿಕೊಂಡು ಮಾಡ್ತೀವಿ ಎಂದು ರೈತ ಹೋರಾಟಗಾರ ಮಂಜುನಾಥ ಪರಗೊಂಡ ತಿಳಿಸಿದ್ದಾರೆ.

ರೈತ ಮುಖಂಡ ಮಂಜುನಾಥ ಪರಗೊಂಡ

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮಹಾವೀರ ಮೋಹಿತೆ. ಪುರಸಭೆ ಸದಸ್ಯರಾದ.ಸಾಬಿರ ಜಮಾದಾರ. ಗುಲಾಬ ಹುಸೇನ್ ಬಾಗವಾನ. ಸಂಜು ಬಡಿಗೇರ.ಚೆನ್ನಪ್ಪ ಬಡಿಗೇರ ಪ್ರತಾಪ್ ಪಾಟೀಲ್.ಶಂಕರ ಹೆಗಡೆ.ಇನ್ನಿತರು ಉಪಸ್ಥಿತರಿದ್ದರು.