ಉ.ಕ ಸುದ್ದಿಜಾಲ ಅಥಣಿ :
ಶೌಚಾಲಯಕ್ಕೆ ಹೋದ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ನಡೆದಿದೆ.
ಹಳ್ಯಾಳ ಗ್ರಾಮದ ಶಿವರಾಯ ಮಲ್ಲಪ್ಪ ಕಾಂಬಳೆ (21) ಮೃತ ದುರ್ದೈವಿಯಾಗಿದ್ದು ಇಬ್ಬರು ಸ್ನೇಹಿತರು ಜೊತೆಯಾಗಿ ಮುಂಜಾನೆ ಸಮೀಪದ ಕರಿಮಸೂತಿ ಕಾಲುವೆ ಬಳಿ ಶೌಚಕ್ಕೆ ಹೋದಾಗ ನೀರು ತರಲು ಮುಂದಾದ ಯುವಕ ಶಿವರಾಯ ಕಾಲುಜಾರಿ ಕಾಲುವೆಯಲ್ಲಿ ಬಿದ್ದು ಮೃತ ಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಅಥಣಿ ಪೊಲೀಸ್ ಹಾಗೂ ಅಗ್ನಿಶಮಾಕ ದಳ ಭೇಟಿ ನೀಡಿ ಕಾರ್ಯಚರಣೆ ನಡೆಸಿ ಶವ ಹೊರ ತೆಗೆದಿದ್ದಾರೆ. ಎದೆ ಎತ್ತರಕ್ಕೆ ಯುವಕನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಭಂದ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ.