ಮಂಗಸೂಳಿ :
ಮಾನವನ ಜೀವನದಲ್ಲಿ ಬಂದೋದಗುವ ಕಷ್ಟ-ಸಂಕಷ್ಟಗಳಿಗೆ ಬೆಳಕಿನ ಆಶಾಕಿರಣಗಳ ಮೂಲಕವೇ ತಿಲಾಂಜಲಿ ಇಡುವ ಮಾಸವೇ ಕಾರ್ತಿಕ ಮಾಸವಾಗಿದೆ ಎಂದು ಬೆಳ್ಳಂಕಿ ಹಿರೇಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಬೆಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಬುಧವಾರ ರಂದು ಮಂಗಸೂಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದಶ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪೋತ್ಸಕ್ಕೆ ಚಾಲನೆ ನೀಡಿ ಪುಜ್ಯರು ಆಶೀರ್ವಚನ ನೀಡಿದರು. ಸನಾತನ ಧರ್ಮದ ಆಚರಣೆ ಹಾಗೂ ತತ್ವಸಿದ್ದಾಂತಗಳು ಮನುಷ್ಯನ ಅಂತರಾತ್ಮಕ್ಕೆ ಜ್ಞಾನದ ಬೆಳಕು ನೀಡಿ ಜೀವನದ ಬದುಕಿನ ಅಂಧಕ್ಕಾರ ತೊಲಗಿಸಿ ಜ್ಞಾನದ ಅರಿವು ಮೂಡಿಸುವ ಕಾರ್ಯ ದೀಪೋತ್ಸವ ಮಾಡುತ್ತದೆ. ಮನುಷ್ಯನ ಬದುಕಿಗೆ ಬೆಳಕಿನ ಅವಶ್ಯಕತೆ ಇದೆ ಎಂದರು.
ಗಿರಿ ಆಶ್ರಮದ ಶ್ರೀ ನಾಗಲಿಂಗ ಸ್ವಾಮಿಜಿ ಮಾತನಾಡಿ ಅಂತರಂಗ ಮತ್ತು ಭಹಿರಂಗ ಶುದ್ದಿಗೊಳಿಸಿ ಸದ್ಬಾವ ಸಂಪದವನ್ನು ತುಂಬಿ ಮಾನವನ ಜೀವನಕ್ಕೆ ಚೇತನ ಶಕ್ತಿಯನ್ನು ತುಂಬಿ ವಿಶ್ವದಲ್ಲೇಡೆ ಬೆಳಕಿನ ಮಹತ್ವ ನೀಡುವ ಶ್ರೇಷ್ಠತೆ ದೀಪಕ್ಕಿದೆ ಎಂದ ಅವರು ವೀರಶೈವರಿಗೆ ಇದು ಪವಿತ್ರ ಮಾಸವಾಗಿದ್ದು, ದೇವರಿಗೆ ಅತ್ಯಂತ ಪ್ರೀತಿಯುಳ್ಳದ್ದಾಗಿದೆ. ಆದ್ದರಿಂದ ಅಂಧಕ್ಕಾರವನ್ನು ಹೊಡೆದೊಡಿಸಲು ಎಲ್ಲೆಡೆಯಲ್ಲಿ ಬೆಳಕನ್ನು ಮೂಡಿಸಿ ಅರಿವು-ಜಾಗೃತಿಯನ್ನುಂಟು ಮಾಡಲಾಗುತ್ತಿದೆ ಎಂದರು.
ಅತಿಥಿಗಳಾಗಿ ಯುವ ಮುಖಂಡ ಶ್ರೀನಿವಾಸ ಪಾಟೀಲ, ಅಶೋಕ ಪಾಟೀಲ, ಸಂಬಾಜಿ ಪಾಟೀಲ, ಶಾಲಿನಿ ದೊಡಮನಿ, ಸುಧಾಕರ ಭಗತ್,ಶ್ರೀಶೈಲ ಕಾಮೇರಿ ದೇವಸ್ಥಾನದ ಅಧ್ಯಕ್ಷ ಚಿದಾನಂದ ಮಾಳಿ, ಟ್ರಸ್ಟಿಗಳಾದ ಮಲ್ಲಪ್ಪ ಕೋಷ್ಠಿ, ಅಶೋಕ ಮಾಳಿ, ಮಲ್ಲಪ್ಪ ಮಗದುಮ್, ಪ್ರಕಾಶ ಮಾಳಿ, ಅಶೋಕ,ಕುಂಬಾರ, ರವಿ ಮಾಳಿ,ಧನಪಾಲ ಕೋಷ್ಠಿ,ಸಂಜಯ ತೇಲಿ,, ಎಸ್.ಎಂ.ಕಾಮೇರಿ, ಪ್ರಮೋದ ಮಾಳಿ, ಪ್ರಭುಲಿಂಗ ಸ್ವಾಮಿ, ಶಿವಾನಂದ ಸ್ವಾಮಿ, ರಾಮು ಮಾಳಿ, ಪ್ರವೀಣ ಕರ್ನಾಳೆ, ಮಹೇಶ ಮಾಳಿ, ಶುಶಾಂತ ಮಾಳಿ, ಸುರೇಶ ಕುಂಬಾರ, ಕೃಷ್ಣಾ ಮಾಳಿ, ವಿಷ್ಣು ಕರ್ನಾಳೆ, ರಾಜು ಮಾಳಿ, ರಮೇಶ ಸದಲಗೆ, ರಾಜೇಶ ಮಾಳಿ, ಅನೀಲ ಜಾಧವ, ಕಿರಣ ಮಾಳಿ,ಅಮೋಲ ಮಾಳಿ,ಮಹಾಂತೇಶ ಮಾಳಿ, ಸ್ವಪ್ನಿಲ ಮಾಳಿ, ಸುರಜ ಮಾಳಿ, ಶಶಿಕಾಂತ ತೇಲಿ, ಬಂಡು ಬುರುಡ, ವಿಷ್ಣು ಕರ್ನಾಳೆ, ಅಶೋಕ ಗುಡುಮೆ ಸೇರಿದಂತೆ ಅನೇಕರು ಇದ್ದರು ದೀಪೋತ್ಸವದ ನಿಮಿತ್ಯ ಸಾವಿರಾರು ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.