ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಅಧಿವೇಶನ ಸಮೀಪಿಸುತ್ತಿದ್ದಂತೆ ಮುನ್ನಲೆಗೆ ಬಂತು ಪುತ್ಥಳಿ ವಿವಾದ ಬೆಳಗಾವಿಯ ಕಣಬರಗಿ ವೃತ್ತದಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ. ಕಳೆದ ಎರಡು ದಿನಗಳ ಹಿಂದೆ ಮೂರ್ತಿ ಪ್ರತಿಷ್ಠಾಪಿಸಿದ್ದ ಕನ್ನಡಿಗ ಯುವಕರು.
ಮಹಾನಗರ ಪಾಲಿಕೆ ಅನುಮತಿ ಇಲ್ಲದೇ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲ ಪ್ರತಿಷ್ಠಾಪಿಸಿದ್ದ ಮೂರ್ತಿ ತೆರವಿಗೆ 48 ಗಂಟೆಗಳ ಗಡುವು ನೀಡಿದ್ದ ಪಾಲಿಕೆ. ಗಡುವು ನೀಡಿದರೂ ವೀರ ರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ತೆರವು ಮಾಡದ ಹಿನ್ನೆಲೆ ನಿನ್ನೆ ರಾತ್ರಿ 11 ಗಂಟೆಗೆ ಪೊಲಿಸರೊಂದಿಗೆ ಮೂರ್ತಿ ತೆರವಿಗೆ ಆಗಮಿಸಿದ ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ.
ಮಾರ್ಕೆಟ್ ವಿಭಾಗದ ಎಸಿಪಿ ಸಂತೋಷ ಸತ್ಯನಾಯಿಕ ಸೇರಿ ನೂರಕ್ಕೂ ಹೆಚ್ಚು ಪೊಲೀಸರು ಆಗಮನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾವಣೆಗೊಂಡ ನೂರಾರು ಯುವಕರು ಸ್ಥಳೀಯರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ಪುತ್ಥಳಿ ತೆರವಿಗೆ ಅವಕಾಶ ನೀಡದ ಸ್ಥಳೀಯ ನಿವಾಸಿಗಳು, ಮಧ್ಯರಾತ್ರಿವರೆಗೂ ಹೈಡ್ರಾಮಾ
ರಾಣಿ ಚೆನ್ನಮ್ಮ ಮೂರ್ತಿ ತೆರವು ಮಾಡದೇ ವಾಪಸ್ ತೆರಳಿದ ಪೊಲೀಸರು, ಪಾಲಿಕೆ ಅಧಿಕಾರಿಗಳು ಬೆಳಿಗ್ಗೆ 4.30ರವರೆಗೂ ಹೈಡ್ರಾಮಾ ಬಳಿಕ ವಾಪಸ್ ತೆರಳಿದ ಪೊಲೀಸರು,ಪಾಲಿಕೆ ಅಧಿಕಾರಿಗಳು ಬೆಳಗಾವಿ ತಾಲೂಕಿನ ಕಣಬರಗಿ ವೃತ್ತದಲ್ಲಿ ಪ್ರತಿಷ್ಟಾಪಿಸಿದ್ದ ರಾಣಿ ಚೆನ್ನಮ್ಮನ ಮೂರ್ತಿ.
ಅನುಮತಿ ಇಲ್ದೆ ಕೂರಿಸಿದ್ದ ಚೆನ್ನಮ್ಮ ಮೂರ್ತಿ ತೆರವಿಗೆ ಬಂದಿದ್ದ ಪೊಲೀಸರಿಗೆ ವಿರೋಧ ವ್ಯಕ್ತಪಡಿಸಿದ್ದ ಜನ ಯಾವುದೇ ಕಾರಣಕ್ಕೂ ಮೂರ್ತಿ ತೆರವಿಗೆ ಅವಕಾಶ ಕೊಡಲ್ಲ. ಅನುಮತಿ ಪಡೆಯಲು ಎರಡು ದಿನ ಕಾಲಾವಕಾಶ ಕೇಳಿದ್ದ ಗ್ರಾಮಸ್ಥರು.
ಕೊನೆಗೆ ಗ್ರಾಮಸ್ಥರ ಮತ್ತು ಪೊಲೀಸರು ಹೈಡ್ರಾಮಾ ಬಳಿಕ ಸದ್ಯಕ್ಕೆ ಮೂರ್ತಿ ತೆರವು ಕೈಬಿಟ್ಟ ವಾಪಸ್ ಹೋದ ಪೊಲೀಸರು. ಇಂದು ಗ್ರಾಮಸ್ಥರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಮೂರ್ತಿ ತೆರವು ಮಾಡಲು ಪೊಲೀಸರ ಸಿದ್ಧತೆ.
ಮತ್ತೊಂದೆಡೆ ಎರಡು ದಿನಗಳ ಕಾಲ ಅನುಮತಿ ಪಡೆಯೊದಕ್ಕೆ ಕಾಲಾವಕಾಶ ಕೇಳಿರುವ ಕಣಬರಗಿ ಗ್ರಾಮಸ್ಥರು ಮಾಳಮಾರುತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.