ಉ.ಕ ಸುದ್ದಿಜಾಲ ಹುಬ್ಬಳ್ಳಿ :
ಸರ್ಕಾರ ಎಷ್ಟು ಬೇಗ ತೊಲಗುತ್ತೋ ಅಷ್ಟು ಒಳ್ಳೇದು ವಕ್ಫ ಸಂವಿಧಾನಕ್ಕಿಂತ ದೊಡ್ಡದು ಅಂತಾರೆ ಜಮೀರ್ ಅಹ್ಮದ್ ರಿಗೆ ಸಂವಿಧಾನ, ಕಾನೂನು ಸಂಬಂಧ ಇಲ್ಲಾ ಅವರು ಏನು ಹೇಳ್ತಾರೆ ಅದೇ ಕಾನೂನು.
ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು ಜೆ ಪಿ ಸಿ ಕಮಿಟಿ ಕರ್ನಾಟಕಕ್ಕೆ ಬಂದಿದೆ ವಕ್ಫ ಮುಖಾಂತರ ಸಮಾಜದಲ್ಲಿ ಅಶಾಂತಿ ಹುಟ್ಟಿಸೋ ಕೆಲಸ ನಡೀತಾ ಇದೆ ವಕ್ಫ ಸಂವಿಧಾನಕ್ಕಿಂತ ದೊಡ್ಡದು ಅಂತಾರೆ. ಲಾ ಆಂಡ್ ಆಕ್ಟ್ ಗಿಂತ ದೊಡ್ಡದು ಅನ್ನೋ ರೀತಿಯಲ್ಲಿ ಕ್ಲಾಸ್ ಗಳ ದುರುಪಯೋಗ ಮಾಡ್ತಾ ಇದ್ದಾರೆ.
ತಿದ್ದುಪಡಿ ಮಾಡೋಕಾಗಿ ಜೆ ಪಿ ಸಿ ಕಮಿಟಿ ಬಂದಿದೆ. ಕರ್ನಾಟಕದಲ್ಲಂತು ಹಾವಳಿ ನಡೀತಾ ಇದೆ. ಈ ಕಾಯ್ದೆ ನಾವು ತಂದಿದಕ್ಕೆ ಎಲ್ಲಾ ರೆಕಾರ್ಡ್ಸ್ ಗಳನ್ನು ತಿದ್ದಿ ವಕ್ಫ ಮಾಡಿಬಿಡಬೇಕು ಸಾವಿರಾರು ರೈತರ ಜಮೀನನ್ನ ರಾತ್ರೋರಾತ್ರಿ ವಕ್ಫಗೆ ಮಾಡಿದ್ದಾರೆ.
ಅಧಿಕಾರದ ಸರ್ವಾಧಿಕಾರ ರೈತರ ಮೇಲೆ ಕಾಂಗ್ರೆಸ್ ಮಾಡ್ತಾ ಇದೆ. ಇದು ಕ್ಷಮೆಗೆ ಅರ್ಹ ಅಲ್ಲಾ. ನಾವು ಇದಕ್ಕೆ ವಿರೋಧ ಮಾಡದೇ ಹೋಗಿದ್ರೆ ರೈತರು ಆತ್ಮಹತ್ಯೆ ಮಾಡಿಕೊಳ್ಳೋ ಸಂದರ್ಭ ಬರ್ತಿತ್ತು. 2015 ರಲ್ಲಿ ವಕ್ಫ ಮಾಡಿರೋದಕ್ಕೆ ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡ್ರು ಅಂತ ಒಂದು ಮನವಿ ಬಂದಿದೆ.
ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ ಸರ್ಕಾರ ಎಷ್ಟು ಬೇಗ ತೊಲಗುತ್ತೋ ಅಷ್ಟು ಒಳ್ಳೇದು. ಜಮೀರ್ ಅಹ್ಮದ್ ರಿಗೆ ಸಂವಿಧಾನ, ಕಾನೂನು ಸಂಬಂಧ ಇಲ್ಲಾ ಅವರು ಏನು ಹೇಳ್ತಾರೆ ಅದೇ ಕಾನೂನು ಆ ರೀತಿ ಜಮೀರ್ ಅಹ್ಮದ್ ರಾಜ್ಯಭಾರ ಮಾಡ್ತಿದ್ದಾರೆ.
ಜೆ ಪಿ ಸಿ ರಚನೆ ಆಗಿದ್ದೆ ವಕ್ಫ ತಿದ್ದುಪಡಿಗೆ ಇಡೀ ದೇಶದಲ್ಲಿ ವಕ್ಫನಿಂದ ಏನೇನು ಆಗಿದೆ ಅಂತ ನೋಡುವ ಅಧಿಕಾರ ಜೆ ಪಿ ಸಿಗೆ ಇದೆ. ಪಾರ್ಲಿಮೆಂಟ್ ಜೆ ಪಿ ಸಿಗೆ ಅಧಿಕಾರ ಕೊಟ್ಟಿದೆ ಹೀಗಾಗಿ ಅವರು ಬಂದಿದ್ದಾರೆ ಇವರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲಾ ಎಂದರು.