ಉ.ಕ ಸುದ್ದಿಜಾಲ ವಿಜಯಪೂರ :
ಬೇವಿನ ಗಿಡದಲ್ಲಿ ಹಾಲು ಬರುತ್ತಿರುವ ಹಿನ್ನೆಲೆ. ಬೇವಿನ ಗಿಡಕ್ಕೆ ಪೂಜೆ ಸಲ್ಲಿಸುತ್ತಿರುವ ಮಹಿಳೆಯರು. ನಾನಿನ್ನು ಉಕ್ಕುತ್ತಿನೆ, ನಿಲ್ಲೋಲ್ಲ ಎಂದು ಗಿಡದಲ್ಲಿ ಹಾಲು ಬರೋದರ ಬಗ್ಗೆ ಹೇಳಿದ ಮೈ ಮೇಲೆ ದೇವರು ಬಂದ ಮಹಿಳೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಮೈ ಮೇಲೆ ದೇವರು ಬಂದ ಮಹಿಳೆ ಬಳಿ ಬೇವಿನ ಗಿಡದಲ್ಲಿ ಹಾಲು ನಿಲ್ಲುವದರ ಬಗ್ಗೆ ಕೇಳಿದ ಮಹಿಳಾ ಭಕ್ತರು. ಮನಗೂಳಿ ಪಟ್ಟಣದ ಧರ್ಮರಾಜ್ ಮಚಗಾರ ಎಂಬುವರ ಜಮೀನಿನಲ್ಲಿರುವ ಬೇವಿನ ಗಿಡದಲ್ಲಿ ಬರುತ್ತಿರುವ ಹಾಲು. ಕಳೆದ ಏಳೆಂಟು ದಿನಗಳಿಂದ ಬೇವಿನ ಗಿಡದಲ್ಲಿ ಬರುತ್ತಿರುವ ಹಾಲು.
ದೇವರ ಪವಾಡವೆಂದು ಬೇವಿನ ಗಿಡ ಪೂಜಿಸುತ್ತಿರುವ ಮಹಿಳೆಯರು. ನಾನು ಯಾವ ಊರಾಕಿ, ಎಲ್ಲಿಂದ ಬಂದು ನೆಲೆಸಿನಿ ಎಂದು ನನ್ನ ಮುಖ ನೋಡಿದ್ರೆ ಯಾವ ದೇವರು ಎಂದು ನಿಮಗೆ ಗೊತ್ತಾಗುತ್ತೆ ಇಲ್ವೋ. ಹಾಲು ಉಕ್ಕಿ ಹರಿಯುತ್ತಿದೆ,ಆ ಹಾಲಿನಲ್ಲಿ ನಾನು ಬರುವಕಿ ಇದ್ದೇನೆ ಎಂದು ಹೇಳಿದ ಮೈ ಮೇಲೆ ದೇವರು ಬಂದ ಮಹಿಳೆ.
ಬರುವ ಅಮಾವಾಸ್ಯೆಯವರೆಗೆ ಬೇವಿನ ಗಿಡದಲ್ಲಿ ಹಾಲು ಬರುತ್ತಂತೆ. ಇಂತಹ ದೇವತೆ ಎಂದು ಭಕ್ತರು ಕಂಡು ಹಿಡಿಯಬೇಕು. ದುರ್ಗಮ್ಮ, ದ್ಯಾಮವ್ವನೂ ಅಲ್ಲ ನಾನು ಆವಾಗ ನಾನು ಯಾರು ಅಂತ ಹೇಳ್ತೀನಿ.