ಉ.ಕ ಸುದ್ದಿಜಾಲ ಗದಗ :

ಕೆಎಸ್‌ಆರ್‌ಟಿಸಿ ಟಿಕೆಟ್ನಲ್ಲಿ ಮಹಾರಾಷ್ಟ್ರ ಸರಕಾರದ ಲಾಂಚನ ಪ್ರಿಂಟ್ ಮಾಡಿದ್ದು ಕನ್ನಡ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ಕೆಎಸ್‌ಆರ್‌ಟಿಸಿ ಯಿಂದ ಮಹಾಯಡವಟ್ಟು ಅಧಿಕಾರಿಗಳ ಅಮಾನತಿಗೆ ಕನ್ನಡಪರ ಸಂಘಟನೆ ಒತ್ತಾಯ ಮಾಡಿದೆ.

ಕೆಎಸ್‌ಆರ್‌ಟಿಸಿ ಟಿಕೆಟ್‌ನಲ್ಲಿ ಕರ್ನಾಟಕ ಸರಕಾರದ ಗಂಡಭೇರುಂಡ ಲಾಂಛನದ ಬದಲಾಗಿ ಮಹಾರಾಷ್ಟ್ರ ಸರಕಾರದ ಲಾಂಚನ ಪ್ರಿಂಟ್ ಇದೆ. ಮಹಾರಾಷ್ಟ್ರ ಸರಕಾರದ ಲಾಂಚನದ ಪ್ರಿಂಟ್ ಇರೋ ಟಿಕೆಟ್ ಗಳನ್ನ ಪ್ರಯಾಣಿಕರಿಗೆ ಕಂಡೆಕ್ಟರ್ ಗಳು ಹರಿದುಕೊಡ್ತಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ದೋಣಿ ಗ್ರಾಮದಿಂದ ಗದಗ ನಗರಕ್ಕೆ ಬರುವ ಸರಕಾರಿ ಬಸ್ ನಲ್ಲಿ ಈ ಟಿಕೆಟ್ ಹಂಚಿಕೆಯಾಗಿದೆ. ಇದೊಂದೇ ಮಾರ್ಗವಲ್ಲ ಬದಲಾಗಿ ಬಹುತೇಕ ನಗರಗಳಿಗೆ, ಹಳ್ಳಿಗಳಿಗೆ ತಾಲೂಕುಗಳಿಗೆ ಹೋಗುವ  ಬಸ್ ಗಳಲ್ಲಿ ಇದೇ ಲಾಂಚನ ಇರುವ ಟಿಕೆಟ್ ನೀಡಲಾಗ್ತಿದೆ. 

ಮಹಾರಾಷ್ಟ್ರ ರಾಜ್ಯ ಪರಿವಾರನ್, ಜೈ ಮಹಾರಾಷ್ಟ್ರ ಅಕ್ಷರಗಳು ಮತ್ತು ಮಹಾರಾಷ್ಟ್ರ ಸರಕಾರದ ಲಾಂಚನ ಪ್ರಿಂಟ್ ಆಗಿರೋ ಟಿಕೆಟ್ ಗಳನ್ನ ಹಂಚುತ್ತಿದ್ದಾರೆ. ಅಂದಹಾಗೆ ಕರ್ನಾಟಕ ಸರಕಾರದ ಟಿಕೆಟ್ ನಲ್ಲಿ ರಾಜ್ಯ ಲಾಂಛನವಾಗಿರೋ ಗಂಡಭೇರುಂಡ ಲಾಂಛನ ಇರ್ತದೆ.

ಆದರೆ, ಗದಗನಲ್ಲಿ ಮಾತ್ರ ಸದ್ಯ ಕೆಲವು ಬಸ್‌ಗಳಲ್ಲಿ ಮಹಾರಾಷ್ಟ್ರ ಟಿಕೆಟ್ ಹಂಚಿಕೆಯಾಗಿದೆ. ಇದರಿಂದ ರೊಚ್ಚಿಗೆದ್ದ ಕನ್ನಡಪರ ಸಂಘಟನೆಗಳು ದಿಢೀರ್ ಪ್ರತಿಭಟನೆಗಿಳಿದಿವೆ. ನಗರದ ಹಳೆ ಬಸ್ ನಿಲ್ದಾಣದಲ್ಲಿ ಯಡವಟ್ಟು ಮಾಡಿದ ನಾಡದ್ರೋಹಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ.