ಉ.ಕ ಸುದ್ದಿಜಾಲ ಚಿಕ್ಕೋಡಿ :
ವರನ ತಾಯಿ ಕುರುಡು ಎಂಬ ವಿಷಯ ತಿಳಿದು ವಧು ಆತ್ಮಹತ್ಯೆಗೆ ಶರಣು, ವರನ ತಾಯಿ ಕುರುಡು ಎಂದು ತಿಳಿದ ನಂತರ ವಧು ಮದುವೆಯ ಹಿಂದಿನ ದಿನ ಮಧ್ಯರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಶೃತಿ ಶಂಕರ್ ಬುರುಡ (24) ಆತ್ಮಹತ್ಯೆಗೆ ಶರಣಾದ ವಧು. ನವಲಿಹಾಳ ಗ್ರಾಮದ ಮೃತ ಶೃತಿ ಶಂಕರ ಬುರುಡ ಬೆಳಗಾವಿಯ ಹುಡುಗನೊಂದಿಗೆ ನಿಶ್ಚಿತಾರ್ಥವಾಗಿತ್ತು.
ಮೇ 25 ರಂದು ಮದುವೆ ನಡೆಯಬೇಕಿತ್ತು. 24 ನೇ ತಾರೀಖಿನಂದು ರಾತ್ರಿ ಅರಿಶಿನ ಹಚ್ಚುವ ಕಾರ್ಯಕ್ರಮವಿತ್ತು. ಅದೇ ದಿನ ರಾತ್ರಿ ಶೃತಿ ಮನೆಯಿಂದ ಕಾಣೆಯಾಗಿದ್ದಳು. ಮರುದಿನ ಬಾವಿಯಲ್ಲಿ ಶೃತಿ ಮೃತದೇಹ ಪತ್ತೆಯಾಗಿದೆ
ತಡವಾಗಿ ಬೆಳಕಿಗೆ ಬಂದ ಪ್ರಕರಣ ಖಡಕಲಾಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವರನ ತಾಯಿ ಕುರುಡು ಎಂಬ ವಿಷಯ ತಿಳಿದು ವಧು ಆತ್ಮಹತ್ಯೆಗೆ ಶರಣು
