ಉ.ಕ ಸುದ್ದಿಜಾಲ ವಿಜಯಪುರ :

ಕೆರೆಯಲ್ಲಿ ಈಜಲು ತೆರೆಳಿದ್ದ ಇಬ್ಬರು ಯುವಕರು ನೀರು ಪಾಲು. ಬಿರು ಬೇಸಿಗೆ ಹಿನ್ನೆಲೆಯಲ್ಲಿ ಕೆರೆಗೆ ಈಜಲು ತೆರಳಿದ್ದ ಯುವಕರು . ನಾಲ್ವರು ಅಪಾಯದಿಂದ ಪಾರು..

ವಿಜಯಪುರ ತಾಲೂಕಿ ಕುಮಟಗಿ ಗ್ರಾಮದ ಹೊರ ಭಾಗದಲ್ಲಿರುವ ಕೆರೆಯಲ್ಲಿ ಘಟನೆ. ವಿಜಯಪುರ ನಗರದ ಆರು ಜನ ಯುವಕರು ಈಜಾಡಲು ಕುಮಟಗಿ ಕೆರೆತೆ ತೆರಳಿದ್ದರು. ಆರು ಜನ ಯುವಕರು ಈಜಾಡುವ ವೇಳೆ ನೀರು ಪಾಲಾದ ಇಬ್ಬರು ಯುವಕರು…

ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾದ ನಾಲ್ವರು ಯುವಕರು. ಓರ್ವ ಯುವಕನನ್ನು ಕೆರೆಯಿಂದ ಹೊರ ತೆಗೆದು ಆಸ್ಪತ್ರೆಗೆ ರವಾನೆ. ಆಸ್ಪತ್ರೆಯಲ್ಲಿ ಯುವಕ ಸಾವು..

ನೀರಲ್ಲಿ ಮುಳುಗಿರುವ ಮತ್ತೋರ್ವ ಯುವಕನಿಗಾಗಿ ಶೋಧ ಕಾರ್ಯ. ಯುವಕನ ಪತ್ತೆಗೆ ಮುಂದಾದ ವಿಜಯಪುರ ಗ್ರಾಮೀಣ ಪೊಲೀಸರು, ಸ್ಥಳೀಯರು.. ಪೊಲೀಸರಿಂದ ಶೋಧ ಕಾರ್ಯ..

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.