ಉ.ಕ ಸುದ್ದಿಜಾಲ ಬೆಳಗಾವಿ :
ವಿದ್ಯುತ್ ಸ್ಪರ್ಶಿಸಿ ಲೈನಮೇನ್ ಸಾವು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹತ್ತಿರ ಜಾಕ್ವೆಲ್ ಬಳಿ ನಡೆದ ಘಟನೆ. ಧಾರವಾಡ ಮತ್ತು ಹುಬ್ಬಳಿ ಜಿಲ್ಲೆಗೆ ನೀರು ಬಿಡುವ ಜಾಕ್ವೆಲ್ ಹತ್ತಿರ ನಡೆದ ಘಟನೆ.
ಸುರೇಶ ಹನಮಂತಪ್ಪ ಇಂಚಲ (46) ಮೃತ ದುರ್ದೈವಿ. ವಿದ್ಯುತ್ ತಗುಲಿ ವಿದ್ಯುತ್ ಕಂಬದಲ್ಲೆ ಜೋತಾಡಿದ ಮೃತದೇಹ. ಹುಬ್ಬಳ್ಳಿ -ಧಾರವಾಡ ನೀರು ಬಿಡುಗಡೆ ಮಾಡುವ ಜಾಕ್ವೆಲ್ ಬಳಿ ನಡೆದ ದುರಂತ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸವದತ್ತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.