ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ಮೇಲೊಂದು ಬೆಚ್ಚಿಬೀಳಿಸುವ ರಾಬರಿ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಘಟನೆ ಹೆದ್ದಾರಿ ಮೇಲೆಯೇ ಗನ್ ತೋರಿಸಿ 3 ಕೋಟಿ ಹಣವಿದ್ದ ವಾಹನ ಸಮೇತ ದುಷ್ಕರ್ಮಿಗಳು ಪರಾರಿ.
ಕೊಲ್ಲಾಪುರದಿಂದ ಬೆಳಗಾವಿ ಮಾರ್ಗವಾಗಿ ಕೇರಳಕ್ಕೆ ಹೊರಟಿದ್ದ ಕಾರನ್ನು ಸಂಕೇಶ್ವರ ಬಳಿ ತಡೆದಿರುವ ದುಷ್ಕರ್ಮಿಗಳು ಕೇರಳದ ಚಿನ್ನಾಭರಣ ವ್ಯಾಪಾರಿ ಭರತ್‌ಗೆ ಸೇರಿದ ಕೋಟ್ಯಾಂತರ ರೂ ಹಣ ಸಮೇತ ಆರೋಪಿಗಳು ಪರಾರಿ ಕೊಲ್ಲಾಪುರದಲ್ಲಿ ಬಂಗಾರ ಮಾರಾಟ ಮಾಡ್ತಿದ್ದ ಕೇರಳದ ಗೋಲ್ಡ್ ವ್ಯಾಪಾರಿ ಭರತ್.
ಭರತ್, ಸೂರಜ್, ಅಜೇಯ್ ಈ ಮೂವರೂ ಮಹಾರಾಷ್ಟ್ರದ ಸಾಂಗ್ಲಿಯ ಮೂಲದವರು ಹಲವು ವರ್ಷಗಳಿಂದ ಕೆರಳದಲ್ಲಿ ಸೆಟ್ಲ ಆಗಿ ಚಿನ್ನಾಭರಣ ವ್ಯಾಪಾರ ಮಾಡ್ತಿರುವ ಭರತ್ ಕಾರನಲ್ಲೇ ಚಿನ್ನಾಭರಣ ತಂದು ಕೊಟ್ಟು ಅದೇ ಕಾರಲ್ಲಿ ಹಣ ಒಯ್ತಿದ್ದ ವ್ಯಾಪಾರಿಯ ಸಂಬಂಧಿ.
ಹಣ-ಚಿನ್ನ ಒಯ್ಯಲೆಂದೇ ಕಾರು ಮಾಡಿಫೈ ಮಾಡಿ ಕಂಪಾರ್ಟ್ ಮೆಂಟ್ ನಿರ್ಮಾಣ ಗೇರ್ ಬಾಕ್ಸ್ ಹತ್ತಿರ ಐದು ಅಡಿ ಅಗಲ, ಎರಡೂವರೆ ಉದ್ದ ಕಂಪಾರ್ಟಮೆಂಟ್ಬಸೀಟ್ ಬಳಿಯೂ ದೊಡ್ಡ ಪ್ರಮಾಣದಲ್ಲಿ ಕಂಪಾರ್ಟಮೆಂಟ್ ನಿರ್ಮಾಣ.
ನಾಲ್ಕು ದಿನಗಳ ಹಿಂದೆ ಚಿನ್ನಕೊಟ್ಟು ಹಣ ಒಯ್ಯುವಾಗ ವಾಹನ ತಡೆದ ದುಷ್ಕರ್ಮಿಗಳು ಗನ್ ತೋರಿಸಿ ವಾಹನದಲ್ಲಿದ್ದ ಮೂವರನ್ನು ಇಳಿಸಿ ವಾಹನ ಸಮೇತ ಪರಾರಿ ಸೂರಜ್, ಅಜೇಯ್ ಪ್ರಯಾಣಿಸುತ್ತಿದ್ದ ಈ ಕಾರು ಚಲಾಯಿಸುತ್ತಿದ್ದ ಆರೀಫ್
ತಕ್ಷಣವೇ 112 ಗೆ ಕಾಲ್ ಮಾಡಿ ವಾಹನ ರಾಬರಿ ಮಾಡಿರುವ ವಿಷಯ ಪೊಲೀಸರಿಗೆ ರವಾನೆ ಹೈಜಾಕ್ ಆದ ಕಾರಲ್ಲೇ ಇತ್ತು ಸೂರಜ್ ಹಾಗೂ ಅಜೇಯಗೆ ಸೇರಿದ ಮೊಬೈಲ್
ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೈಜಾಕ್ ಆದ ವಾಹನ ಪತ್ತೆಗಿಳಿದ ಪೊಲೀಸರು ದೂರು ದಾಖಲಿಸುವಾಗ 75 ಲಕ್ಷ ಹಣ ವಾಹನದಲ್ಲಿಟ್ಟು ಎಂದು ಹೇಳಿರುವ ದೂರುದಾರರು
ಸೂರಜ್ ಹಾಗೂ ಅಜೇಯ್ ಮೊಬೈಲ್ ಟ್ರ್ಯಾಕ್ ಮಾಡಿ ಕಳ್ಳರ ಬೆನ್ನು ಬಿದ್ದಿದ್ದ ಪೊಲೀಸರು ಕಿತ್ತೂರತ್ರ ಒಂದು ಮೊಬೈಲ್, ಶಿಗ್ಗಾಂವಿ ಹತ್ರ ಮತ್ತೊಂದು ಮೊಬೈಲ್ ಎಸೆದಿರುವ ಆರೋಪಿಗಳು
ಪೊಲೀಸರಿಗೆ ಚಲ್ಲೆಹಣ್ಣು ತಿನ್ನಿಸಲು ಬೇರೆ ವಾಹನದಲ್ಲಿ ಮೊಬೈಲ್ ಒಯ್ದು ಎಸೆದು ಬಂದಿರುವ ಶಂಕೆ ಟೋಲ್ ಗೇಟ್‌ಗಳ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಹೈಜಾಕ್ ಅದ ವಾಹನ ಪಾಸ್ ಆಗದಿರುವುದು ದೃಢ
ಹುಕ್ಕೇರಿ ಮಾರ್ಗದಲ್ಲಿ ಪರಿಶೀಲಿಸುವಾಗ ನೇರ್ಲಿ ಗ್ರಾಮದ ಬಳಿ ವಾಹನ ಪತ್ತೆ ವಾಹನದಲ್ಲಿ ಗೇರ್‌ಬಾಕ್ಸ್ ಕಂಪಾರ್ಟಮೆಂಟ್‌ನಲ್ಲಿ 1ಕೋಟಿ 1ಲಕ್ಷ ನಗದು ಪತ್ತೆ ಕಾರಿನ ಇನ್ನೊಂದು ಕಂಪಾರ್ಟಮೆಂಟ್‌ನಲ್ಲಿದ್ದ ಹಣ ಅಬೇಸ್ ಆಗಿರುವ ಶಂಕೆ
ಮೂರು ತಂಡಗಳಿಂದ ಕಾರ್ಯಾಚರಣೆ, ಪೊಲೀಸರಿಂದ ಮುಂದುವರೆದ ತನಿಖೆ.ಬೆಳಗಾವಿ ಎಸ್ಪಿ ಡಾ ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.