ಮೋಳೆ‌ :

ಬಡತನದಲ್ಲಿ ಹುಟ್ಟಿ ಹಲವಾರು ಕಷ್ಟದ ಮೆಟ್ಟುಲುಗಳನ್ನ ದಾಟಿ ಇಂದು ಉನ್ನತ ಹುದ್ದೆ ಅಲಂಕರಿಸುವುದರ ಮೂಲಕ ಇತರ ಬಡ ಮಕ್ಕಳಿಗೆ ಹಾಗೂ ಬಡ ರೈತನ ಮಕ್ಕಳಿಗೆ ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು, ಸತತ ಪರಿಶ್ರಮ, ಸತತ ಓದು ಗುರುವಿಲ್ಲದೆಯೂ ನಮ್ಮ ಗುರಿಯನ್ನು ತಲುಪಲು ಸಹಕಾರಿ ಅನ್ನುವುದನ್ನ ಇಂದು ಚಾಲಕನ‌ ಮಗ ಸಾಧನೆ ಮಾಡುವುದರ ಮೂಲಕ ಆ ಗ್ರಾಮದ ಹೆಮ್ಮೆಯ ಜೊತೆಗೆ ತಂದೆ ತಾಯಿಯ ಗೌರವವನ್ನು ಹೆಚ್ಚಿಸಿದ್ದಾನೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಚಾಲಕನ ಮಗ ಇಂದು ಐಪಿಎಸ್ ಪಾಸಾಗಿ ಸಾಧನೆ ಮಾಡಿದ್ದು, ಎಲ್ಲರಿಗೂ ಸ್ಪೂರ್ತಿಯಾಗಿದ್ದಾನೆ. ಜಗದೀಶ ಅಡಹಳ್ಳಿ  ಯುಪಿಎಸ್‌ಸಿ ಪರೀಕ್ಷೆಯಲ್ಲಿ 440 ನೇ ರ್ಯಾಂಕ ಪಡೆದು ಸದ್ಯ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸೋಮವಾರ ಮೋಳೆ ಗ್ರಾಮದ ಶಿವಮಂದಿರದಲ್ಲಿ ಮಾಳಿ‌ ಸಮಾಜದ ವತಿಯಿಂದ ಸತ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಗ್ರಾಮದ ಮಾಳಿ ಸಮಾಜದವರು ಸೇರಿ ಜಗದೀಶ ಅಡಹಳ್ಳಿ ಅವರಿಗೆ ಸತ್ಕಾರ ಮಾಡಿದರು. ಸತ್ಕಾರ ಬಳಿಕ ಜಗದೀಶ ಅಡಹಳ್ಳಿ ಮಾತನಾಡಿ ಬಡವನಾಗಿ ಹುಟ್ಟುವುದು ತಪ್ಪಲ್ಲ ಬಡವನಾಗಿ ಸಾಯುವುದು ತಪ್ಪಲ್ಲ ಹೀಗಾಗಿ ನಾವು ಮೊದಲೇ ಮಧ್ಯಮ ವರ್ಗದವರು ನಮ್ಮಗೆ ರಾಜಕೀಯ ಗೊತ್ತಿಲ್ಲ, ಬಿಜನಸ್ ಮಾಡಲು ಕೂಡ ಹಣವಿಲ್ಲ, ನಮ್ಮಗೆ ಇರುವುದೊಂದೆ ಅಸ್ತ್ರ ವಿದ್ಯೆ ಹೀಗಾಗಿ ನಾವು ನಮ್ಮ ಜ್ಞಾನದಿಂದ ಕಡಿಮೆ ಖರ್ಚಿನಲ್ಲಿ ಶ್ರೀಮಂತರಾಗಬಹುದು ಎಂದು ಹೇಳಿದರು.

ಈ‌ ಸಂಧರ್ಭದಲ್ಲಿ ಮಾಳಿ‌ಸಮಾಜದ ಮುಖಂಡರು‌, ಗ್ರಾ.ಪಂ ಸದಸ್ಯರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.