ಉ.ಕ ಸುದ್ದಿಜಾಲ ಚಿಕ್ಕೋಡಿ :
ಚಿಕ್ಕೋಡಿ ಲೋಕಸಭಾ ಪೈಟ್ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹೌದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಿದ್ದೆಗೆಡಿಸಿದ ಮಾಜಿ ಐಎಎಸ್ ಅಧಿಕಾರ ಶಂಭು ಕಲ್ಲೋಳಕರ ಲೋಕಸಭಾ ಚುನಾವಣೆಗೆ ಸ್ಪರ್ದಿಸುವದು ಖಚಿತವಾಗಿದ್ದು ಇಂದು ಚಿಕ್ಕೋಡಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರವಲಯದ ಪಾರ್ಮ ಹೌಸನಲ್ಲಿ ಸಭೆ ನಡೆಸಿದ ಕಲ್ಲೋಳಕರ ಅನೇಕ ಬೆಂಬಲಿಗರೊಂದಿಗೆ ಲೊಕಸಭಾ ಚುನಾವಣೆಗೆ ನಿಲ್ಲುವದು ನಿರ್ದಾರ ಮಾಡಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಭಾರಿ ಹೊಡೆತ ನೀಡಿ ಬಹುಮತ ಪಡೆದು ಗೆಲುವಿನ ಅಂಚಿನಲ್ಲಿ ಪರಾಭವಗೊಂಡ ಕಲ್ಲೋಳ್ಕರ ಇದೀಗ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸಿದ್ದಾರೆ.
ಇತ್ತ ಕಾಂಗ್ರೆಸ್ ನಿಂದ ಪ್ರಿಯಾಂಕಾ ಜಾರಕಿಹೊಳಿ ಕಣದಲ್ಲಿ ಇದ್ದರೆ ಬಿಜೆಪಿಯಿಂದ ಅಣ್ಣಾಸಾಹೇಬ ಜೊಲ್ಲೆ ಪ್ರತಿಸ್ಪರ್ದಿಯಾಗಿದ್ದು ಸ್ವತಂತ್ರ ಪಕ್ಷದಿಂದ ಶಂಭು ಕಲ್ಲೋಳ್ಕರ್ ಕಣದಲ್ಲಿರುವದು ತ್ರಿಕೋನ ಸ್ಪರ್ದೆಗೆ ಮುಂದಾಗಿದ್ದಾರೆ.
ಮಾಜಿ ಐಎಎಸ್ ಅಧಿಕಾರಿಯಯಾದ ಶಂಭು ಕಲ್ಲೋಳಕರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚಿಕ್ಕೋಡಿ ಚುನಾವಣಾಧಿಕಾರಿ ರಾಹುಲ್ ಶಿಂಧೆ ಅವರಿಗೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಶಂಭೂ ಕಲ್ಲೋಳಿಕರ.
ಇದೇ ತಿಂಗಳು 15 ರಂದು ತಮ್ಮ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನದ ಮೂಲಕ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿರೋ ಶಂಭು ಕಲ್ಲೋಳಕರ.