ಮೋಳೆ :

ಸುತ್ತಮುತ್ತಲಿನ ವಾತಾವರಣ ಹಾಗೂ ನಮ್ಮ ನಿಸರ್ಗ ಸುಂದರವಾಗಿರಲು ಗಿಡ ಮರಗಳು ಅವಶ್ಯಕವಾಗಿದ್ದು ಎಲ್ಲರೂ ತಮ್ಮ ಮನೆಯ ಸುತ್ತಮುತ್ತ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಸಸಿಗಳನ್ನ ನೆಡುವಂತೆ ಎಲ್ಲರು ಪ್ರತಿಜ್ಞೆ ಮಾಡಿ ನಮ್ಮ ಸುತ್ತಲಿನ ಪರಿಸರವನ್ನು ಹಚ್ಚು ಹಸಿರಿನಿಂದ ಕಾಪಾಡ ಬೇಕೆಂದು ಮೋಳೆ ಗ್ರಾಮ ಪಂಚಾಯತಿ‌ ಅಧ್ಯಕ್ಷ ಭೂತಾಳಿ ಥರಥರೆ ಹೇಳಿದರು.

ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಸಂಘದ ವತಿಯಿಂದ ಆಯೋಜಿಸಿದ ಪರಿಸರ ದಿನಾ ಆಚರಣೆ ಅಂಗವಾಗಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ‌ ಅವರು ಶಾಲೆಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ ಜೊತೆಗೆ ತಮ್ಮ ಪಾಲಕರು‌ ಸಹಿತ ಪ್ರತಿ ತಿಂಗಳು ಒಂದರಂತೆ ಸಸಿಗಳನ್ನ ನೆಟ್ಟು ಅವುಗಳನ್ನು ಲಾಲಾಲನೆ ಪಾಲನೆ ಮಾಡಿದ್ದಲ್ಲಿ ನಮ್ಮ ಸುತ್ತ ಮುತ್ತ ಪರಿಸರವು ಹಚ್ವು ಹಸಿರಿನಿಂದ ಕೂಡಿರುತ್ತದೆ ಅದಕ್ಕೆ ನಾವೆಲ್ಲರು ಪ್ರತಿಜ್ಞೆ ಮಾಡಿ ಗಿಡಗಳನ್ನ ಬೆಳಸೊನ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯರು, ಧರ್ಮಸ್ಥಳ ಸಂಘದ ಪದಾಧಿಕಾರಿಗಳು, ಶಿಕ್ಷರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.