ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದಲ್ಲಿರುವ ಅಡವಿಸಿದ್ಧೇಶ್ವರ ಮಠದಲ್ಲಿ ನಿನ್ನೆ ರಾತ್ರಿ ಹೈಡ್ರಾಮಾ ನಡೆದಿದೆ.
ರಾತ್ರಿಹೊತ್ತು ಮಠದ ಸ್ವಾಮೀಜಿ ಮಹಿಳೆ ಜೊತೆ ಇರೋದನ್ನು ಕಂಡ ಸ್ಥಳೀಯ ಏಕಾಏಕಿ ಮಠಕ್ಕೆ ನುಗ್ಗಿ ತರಾಟೆ ತೆಗೆದುಕೊಂಡಿದ್ದಾರೆ.
ಮಠದ ಅಡವಿಸಿದ್ಧರಾಮ ಶ್ರೀ ಅವರು ಮಹಿಳೆ ಜೊತೆ ಇರುವಾಗ ಸ್ಥಳೀಯರ ಕೈಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ವಾಮೀಜಿ ಮೇಲೆ ಅನಾಚಾರ ಶಂಕೆ ವ್ಯಕ್ತಪಡಿಸಿರುವ ಸ್ಥಳೀಯರು, ಸ್ವಾಮೀಜಿಯ ರೂಮಿಗೆ ನುಗ್ಗಿ ತರಾಟೆ ತೆಗೆದುಕೊಂಡಿದ್ದಾರೆ.
ಆಗಿದ್ದೇನು..?
ಮಠದ ಸ್ವಾಮೀಜಿ ರೂಮಿನಲ್ಲಿ ಮಹಿಳೆ ಇರುವುದನ್ನು ಕೆಲವು ಯುವಕರು ಕಂಡಿದ್ದಾರೆ. ಆಗ ತಕ್ಷಣವೇ ಊರಿನವರಿಗೆಲ್ಲ ಸುದ್ದಿ ಹರಡಿ ಮಠಕ್ಕೆ ನೂರಾರು ಮಂದಿ ದೌಡಾಯಿಸಿದ್ದಾರೆ. ರೂಮಿನಲ್ಲಿ ಸ್ವಾಮೀಜಿ ಹಾಗೂ ಮಹಿಳೆ ಇರೋದು ಕಂಡುಬಂದಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು, ಸ್ವಾಮೀಜಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಈ ವಿಚಾರ ಮೂಡಲಗಿ ಠಾಣೆಯ ಪೊಲೀಸರ ಕಿವಿಗೆ ಬಿದ್ದಿದೆ. ಕೂಡಲೇ ಅಲ್ಲಿಗೆ ಆಗಮಿಸಿದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ತಕ್ಷಣವೇ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ.
ಬಳಿಕ ಸ್ವಾಮೀಜಿ ಹಾಗೂ ಗ್ರಾಮಸ್ಥರ ಜೊತೆ ಸಭೆ ನಡೆಸಿದ್ದಾರೆ. ಅಡವಿಸಿದ್ಧರಾಮ ಸ್ವಾಮೀಜಿ ಯಾವುದೇ ಕಾರಣಕ್ಕೂ ಮಠದಲ್ಲಿ ಇರಬಾರದು ಎಂದು ಆಗ್ರಹಿಸಿದ್ದಾರೆ. ಸ್ಥಳೀಯರ ವಿರೋಧ ಬೆನ್ನಲ್ಲೇ ಮಠಬಿಟ್ಟು ಅಡವಿಸಿದ್ಧರಾಮ ಸ್ವಾಮೀಜಿ ಮಠಬಿಟ್ಟು ತೆರಳಿದ್ದಾರೆ.
ಮಹಿಳೆ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಖ್ಯಾತ ಸ್ವಾಮೀಜಿ; ಮಠದಿಂದಲೇ ಓಡಿಸಿದ ಸ್ಥಳೀಯರು
