ಉ.ಕ ಸುದ್ದಿಜಾಲ ಚಿಕ್ಕೋಡಿ :
ಚಿಕ್ಕೋಡಿಯಲ್ಲಿ ಮೊನ್ನೆಯಷ್ಟೆ ಬಸ್‌ನಿಂದ ಆಯತಪ್ಪಿ ಬಿದ್ದು ವಿದ್ಯಾರ್ಥಿ ಆಸ್ಪತ್ರೆ ಸೇರಿದ ಮರು ದಿನವೇ ಮತೊರ್ವ ವಿದ್ಯಾರ್ಥಿನಿ ಬಸ್ ಮುಂದಿನ ಬಾಗಿಲಿನಿಂದ ಬಿದ್ದು ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು ಚಿಕ್ಕೋಡಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಶ್ರುತಿ ಸಲಗರೆ (18) ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಬಸ್ಸಿನಿಂದ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.
ಮಹಾವಿದ್ಯಾಲಯದಿಂದ ಸ್ವಗ್ರಾಮ ಯಕ್ಸಂಬಾ ಪಟ್ಟಣಕ್ಕೆ ಚಿಕ್ಕೋಡಿ-ಯಕ್ಸಂಬಾ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮರಳುವಾಗ ಮುಂಬಾಗಿಲಿನಿಂದ ಹೊರಗೆ ಬಿದ್ದು, ಬಸ್ಸಿನ ಹಿಂಬದಿಯ ಚಕ್ರದಲ್ಲಿ ಸಿಲುಕಿದ್ದರಿಂದ ಕೈಗೆ ಬಲವಾದ ಪೆಟ್ಟು ಬಿದ್ದಿದೆ.
ಚಿಕ್ಕೋಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸೋಮವಾರ ನಂದಿಕುರಳಿ ಗ್ರಾಮದ ನಿವಾಸಿ ಸಂಜನಾ ದತ್ತವಾಡೆ (17) ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಆಯ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಕೆಳಗೆ ಬಿದ್ದು ತಲೆಗೆ ಗಂಭೀಯ ಗಾಯಗೊಂಡ ಘಟನೆ ನಡೆದ ಬೆನ್ನಲ್ಲಿಯೇ ಮತ್ತೊಂದು ಪ್ರಕರಣ ಸಂಭವಿಸಿದೆ. ಬಸ್ಸಿನ ಮೂಲಕ ಪ್ರಯಾಣ ಮಾಡುವ ವಿದ್ಯಾರ್ಥಿ-ಪಾಲಕರಲ್ಲಿ ಆತಂಕ ಮನೆ ಮಾಡಿದೆ.