ಉ.ಕ ಸುದ್ದಿಜಾಲ ಕಾಗವಾಡ :

ಪ್ರತಿ ವರ್ಷ ಶ್ರಾವಣ ಮಾಸದ ಮೂಲ ನಕ್ಷತ್ರದ ದಿನ ಇಲ್ಲಿ ಕರಿ ಹರಿಯುವುದು ವಿಶಿಷ್ಟವಾದ ಒಂದು ಸಾಂಸ್ಕೃತಿಕ ಹಬ್ಬ. ಈ ಹಬ್ಬದ ದಿನ ಕನಾಟಕ ಹಾಗೂ ಮಹಾರಾಷ್ಟçದ ಗಡಿ ಭಾಗದ, ಮಿರಜ, ಸಾಂಗಲಿ, ಸಾತಾರಾ, ಕೊಲ್ಲಾಪೂರ, ಇಚಲಕರಂಜಿ, ಜಮಖಂಡಿ, ಅಥಣಿ, ಚಿಕ್ಕೋಡಿ, ರಾಯಬಾಗ, ಗೋಕಾಕ ಸೇರಿದಂತೆ ಗಡಿಭಾಗದ ಎಲ್ಲ ನಗರಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ.

ಕಾಗವಾಡ ಕಾರು ಹುಣಿಮೆ ಒಮ್ಮೆಯಾದರೂ ನೋಡಲೇಬೇಕು

ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗವಾದ ಕಾಗವಾಡ ಗ್ರಾಮದ ಐತಿಹಾಸಿಕ ಕಾರಹುಣ್ಣಿಮೆ ನೆರವೆರಿದ್ದು ಈ ಕಾರು ಹುಣಿಮೆ ನೋಡಲು ಕರ್ನಾಟಕ‌ ಮಹಾರಾಷ್ಟ್ರದ ಸಾವಿರಾರು ರೈತರು ಬಂದು ವೀಕ್ಷಣೆ ಮಾಡುವುದು ಒಂದು ಐತಿಹಾಸಿಕ ಎಂದರೆ ತಪ್ಪಾಗಲಿಕ್ಕಿಲ್ಲ.

ಕಾಗವಾಡ ಕಾರು ಹುಣಿಮೆಯಲ್ಲಿ ಒಟ್ಟು ಮೂರು ಎತ್ತುಗಳು ಕರಿ ಹರಿಯುವುದು ವಿಶೇಷ ಇದರಲ್ಲಿ ಗೌಡರ ಮನೆತನದ ಎರಡು ಎತ್ತುಗಳು ಹಾಗೂ ಕರವ ಮನೆತನದ ಒಂದು ಎತ್ತು ಪಾಲ್ಗೊಂಡಿದ್ದವು. ಇದರಲ್ಲಿ ಕಾಗವಾಡ ಕರವ್ ಮನೆತನದ ಎತ್ತು ಪ್ರಥಮವಾಗಿ ಕರಿ ಹರಿಯುವಲ್ಲಿ ಯಶಸ್ವಿಯಾಗಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಐತಿಹಾಸಿಕ ಕಾರಹುಣ್ಣಿಮೆಯಲ್ಲಿ ಎತ್ತುಗಳ ಕರಿ ಹರಿಯುವ ಕಾರ್ಯಕ್ರಮವು ಸಾವಿರಾರು ಜನರ ಉಪಸ್ಥಿತಿಯಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. ಕಾರು ಹುಣ್ಣಿಮೆ ದಿನದಂದು ಬೆಳಿಗ್ಗೆಯಿಂದ ಕರವ ಮನೆತನದ ಯುವಕನೋರ್ವ ಕೈಯಲ್ಲಿ ಬಾಳ ಬಟ್ಟಲನ್ನು ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವದ ಮೆರವಣಿಗೆ ಮೂಲಕ ಎಲ್ಲ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆಯುವ ಕಾರ್ಯಕ್ರಮ ನಡೆಯಿತು. ಕೈಯಲ್ಲಿ ಬಾಳಬಟ್ಟಲವನ್ನು ಹಿಡಿದುಕೊಂಡ ಯುವಕನ ಸುತ್ತಮುತ್ತಲಿನ ಗ್ರಾಮಸ್ಥರು ಕೈಯಲ್ಲಿ ಬಡಿಗೆ ಆಯುಧಗಳನ್ನು ಹಿಡಿದುಕೊಂಡು ಯುವಕನಿಗೆ ರಕ್ಷಣೆ ನೀಡಿದ್ದರು.

ಸಾಯಂಕಾಲ ಗ್ರಾಮ ಪಂಚಾಯತ ಕಾರ್ಯಾಲಯದ ಎದುರಿಗೆ 15 ಅಡಿ ಎತ್ತರದ ಮುಳ್ಳಿನ ಬನ್ನಿಯ ಕಂಟಿಯನ್ನು ಒಟ್ಟಿ ಅದರ ಮೇಲಿಂದ ಮೂರು ಎತ್ತುಗಳನ್ನು ಓಡಿಸಲಾಗುತ್ತದೆ. ಎತ್ತುಗಳಿಗೆ ಮೈತುಂಬ ಕೆಂಪು ಬಣ್ಣ ಬಳಿದು, ಎತ್ತುಗಳೊಂದಿಗೆ ನೂರಾರು ಬಲಿಷ್ಠ ಯುವಕರು ಬರಿ ಮೈಯಿಂದ ವಾದ್ಯ ವೈಭವದೊಂದಿಗೆ ಕೇ ಕೇ ಹಾಕುತ್ತಾ ಕರಿಹರಿಯುವ ಸ್ಥಳಕ್ಕೆ ಆಗಮಿಸಿ ಸ್ಪರ್ಧೆಗೆ ಅಣಿಯಾಗಿದ್ದರು.

ಪೋಲಿಸರ ಬಂದೂಕಿನಿಂದ ಸಪ್ಪಳವಾಗುತ್ತಿದ್ದಂತೆ ಮೂರು ಎತ್ತುಗಳು ನಾ ಮುಂದು, ತಾ ಮುಂದು ಎಂದು ಎತ್ತುಗಳು ಕರಿಹರಿದವು. ಯುವಕರು ತಮ್ಮ ಜೀವದ ಹಂಗು ತೊರೆದು ಪಾಲ್ಗೊಂಡಿದ್ದರು. ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯು ದನಗಳ ಹಬ್ಬವೆಂದು ಪ್ರಸಿದ್ಧವಾದರೆ, ಕಾಗವಾಡದಲ್ಲಿ ಕರಿಹರಿಯುವ ಹಬ್ಬ ಎಂದು ಪ್ರಸಿದ್ದಿ ಪಡೆದುಕೊಂಡಿದೆ.

ಅಥಣಿ ಡಿವೈಎಸ್‍ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ ಇವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ನೀಡಲಾಗಿತ್ತು. ಕಾಗವಾಡ ಪಟ್ಟಣ ಪಂಚಾಯತಿಯ ಮುಂಭಾಗದಲ್ಲಿ ಸುಮಾರು 10 ಅಡಿ ಎತ್ತರದ ಮುಳ್ಳಿನ ಬನ್ನಿ ಕಂಟಿಗಳಲ್ಲಿ ಎತ್ತುಗಳನ್ನು ಹಾಯ್ದು ಕರಿ ಹರಿದವು.

ಬೆಳ್ಳಿ ಬಟ್ಟಲ್ ಮೆರವಣೆಗೆ :

ಕಾಗವಾಡದ ಜೈನ್ ಸಮಾಜದ ಕರವ್ ಮನೆತನದ ಅವಿವಾಹಿತ ಬಾಲಕನ ಕೈಯಲ್ಲಿ ಬೆಳ್ಳಿ ಬಟ್ಟಲ್ ನೀಡಿ ಇಡಿ ಗ್ರಾಮದ ಮುಖ್ಯ ಮಾರ್ಗಗಳಿಂದ ಮೆರವಣೆಗೆ ಹಮ್ಮಿಕೊಂಡು ಎಲ್ಲ ಸಮಾಜದ ದೇವರ ಮಂದಿರದಲ್ಲಿ ಪೂಜೆ ಸಲ್ಲಿಸಿ, ಗ್ರಾಮದ ಇಂದ್ರಜೀತ ಪಟವರ್ಧನ ಇವರಿಂದ ಸನ್ಮಾನ ಸ್ವಿಕರಿಸಿ, ಮೆರವಣೆಗೆ ಕೋನೆಗೊಳಿಸಿದರು.

ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ಪವನ ಪಾಟೀಲ, ಕಾಕಾ ಪಾಟೀಲ, ಕರವ ಮನೆತನದ ರಾಜೇಂದ್ರ ಕರವ, ಶುಭಂ ಕರವ, ಶಾಂತಿನಾಥ ಕರವ, ಸುಧೀರ ಕರವ, ಅಜೀತ ಕರವ, ಉಪತಹಶೀಲ್ದಾರ ಅಣ್ಣಾಸಾಹೇಬ ಕೋರೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.