ಅಥಣಿ :
ಬೆಳಗಾವಿ ಜಿಲ್ಲೆಯ ಅಥಣಿ ಪುರಸಭೆ ಚುನಾವಣೆಗೆ ಸುಮಾರು 25 ಜನರನ್ನು ಸೇರಿಸಿ ಆಯ್ಕೆ ಸಮಿತಿ ಮಾಡಿ, ಉತ್ಸುಕ ಉಮೇದುವಾರರಿಂದ ಅರ್ಜಿ ಆಹ್ವಾನಿಸಿ ಅವರವರ ಅರ್ಜಿಗಳ ಆಧಾರದ ಮೇಲೆ ಅಲ್ಲಿ ವಾರ್ಡಿಗೆ ಆಯ್ಕೆ ಸಮೀತಿಯವರು ಹೋಗಿ ಪರಿಶೀಲನೆ ಮಾಡಿ, ಜನರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಪಕ್ಷಪಾಥ ಮಾಡದೇ ಸೂಕ್ತ ಅಬ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹಿರಿಯ ಮುಖಂಡ ಅನೀಲರಾವ ದೇಶಪಾಂಡೆ ಅವರು ತಿಳಿಸಿದರು.
ಅಥಣಿಯಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ಅಥಣಿ ಪುರಸಭೆ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡುತ್ತಾ ಆಯ್ಕೆ ಸಮಿತಿ ಮೇಲೆ ಯಾವುದೇ ಅಪವಾದ ಬರದ ಹಾಗೆ ನಾವು ಆಯ್ಕೆ ಮಾಡಿದ್ದೇವೆ ಎಂದರು. ಸ್ಥಳೀಯ ಮತದಾರರ ಅನಿಸಿಕೆ ವಿರುದ್ದವಾಗಿ ಬೇರೆ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗಿಲ್ಲ ಎಂದರು. ಇದೀಗ 27 ವಾರ್ಡಿನಲ್ಲಿ ಸುಮಾರು 25 ಅಭ್ಯರ್ಥಿಗಳನ್ನು ಘೊಷಣೆ ಮಾಡುತ್ತಿದ್ದೆವೆ ಎಂದು ಆಯ್ಕೆ ಸಮೀತಿ ಸದಸ್ಯರು ಪಟ್ಟಿ ಬಿಡುಗಡೆ ಮಾಡಿದರು.
ಈ ವೇಳೆ ಶಿವಕುಮಾರ ಸವದಿ, ಕೇತಗೌಡರ, ಅಣ್ಣಾಸಾಹೇಬ ನಾಯಿಕ, ಶಿವಾನಂದ ದಿವಾನಮಳ, ಹಣಮಂತ ಕಾಲುವೆ, ರಾಮನಗೌಡ ಪಾಟೀಲ, ನಿತೀನ ಗೊಂಗಡಿ, ಮಹೇಶ ಗುಂಡಾ, ಆನಂದ ಟೊಣಪಿ, ಅಶೋಕ ದಾನಗೌಡರ, ಗೋಟಕಿಂಡಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.