ಉತ್ತರ ಕರ್ನಾಟಕ ಸುದ್ದಿಜಾಲ ಬಾಗಲಕೋಟೆ :

ಕೂಡಲಸಂಗಮದ ನದಿಯಲ್ಲಿ ಸ್ನಾನ ಮಾಡಲು ಹೋದ ಮಹಿಳೆ ನದಿ ಪಾಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮ ನದಿಯಲ್ಲಿ ನಡೆದಿದೆ.

ಗದಗ ನಗರದ ದಾಸರ ಓಣಿಯ ನಿವಾಸಿ ಜ್ಯೋತಿ ಬುಡಕಹಳ್ಳಿ (೨೩) ನದಿಯಲ್ಲಿ ಮುಳುಗಿ ಸಾವನಪ್ಪಿದ್ದಾಳೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಯ ತ್ರಿವೇಣಿ ಸಂಗಮ‌ ಸ್ಥಳಕ್ಕೆ ಹುನಗುಂದ ಅಗ್ನಿಶಾಮದಳ ಭೇಟಿ. ಮಹಿಳೆ ಶವ ಹೊರ ತೆಗೆದ ಅಗ್ನಿಶಾಮಕ ದಳ ಸಿಬ್ಬಂದಿ. ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕುಟುಂಬ ಸಮೇತ ಕೂಡಲಸಂಗಮಕ್ಕೆ ಬಂದಿದ್ದ‌ ಮಹಿಳೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.