ಉ.ಕ‌ ಸುದ್ದಿಜಾಲ ವಿಜಯಪುರ :

ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಹೊರಬಿತ್ತು ಮತ್ತೊಂದು ಭವಿಷ್ಯವಾಣಿ ಕಾಂಗ್ರೆಸ್ ಗೆ ಶಾಕಿಂಗ್, ಬಿಜೆಪಿಗೆ ಸಿಹಿ ಜೊತೆಗೆ ಕಹಿ ಎಚ್ಚರಿಕೆ ನುಡಿದ ಮಖಣಾಪುರ ಗ್ರಾಮದಲ್ಲಿ ಕಲ್ಲೂರಸಿದ್ದನ ಕಾರ್ಣಿಕ ಭವಿಷ್ಯವಾಣಿ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಖಣಾಪುರ ಗ್ರಾಮದ ಕಲ್ಲೂರಸಿದ್ದನ ಕಾರ್ಣಿಕ ಭವಿಷ್ಯವಾಣಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಎನ್ನುವ ಕಾರ್ಣಿಕ ವಿಶ್ಲೇಷಣೆ.

ಸಾಕ್ಷಾತ್ ಶಿವ ಕಲ್ಲೂರ ಸಿದ್ದನ ನಾಲಿಗೆ ಮೇಲೆ ಕುಳಿತು ನುಡಿಯುವ ಕಾರ್ಣಿಕ ಅಂತ ನಂಬಿಕೆ. ಗುಡ್ಡದಾಗಿನ ಹುಲಿ ತಡಬರಸಲಿಕ್ಕತ್ತಿತು. ಕಾಂಗ್ರೆಸ್ ಬಿಜೆಪಿ ಕಚ್ಚಾಟ ನಡೀತು. ಕಾಂಗ್ರೆಸ್ ಕಲ್ಲಾಗಿ ನಿಂತು ನೋಡಲಿಕ್ಕತ್ತಿತು. ಬಿಜೆಪಿ ಬೆಲ್ಲಾಯ್ತು, ಬೆಲ್ಲ ಹೋಗಿ ಬೆಂವ್ ಆಯ್ತು.

ಬೆಂವ್ ಹೋಗಿ ಕಹಿ ಆಗುತ್ತದಲೇ ಎಂದು ಕಾರ್ಣಿಕ ನುಡಿ. ಮುಂಗಾರು ಮಳೆ ಸಂಪ್ ಆಗುತ್ತಲೆ ಎಂದು ನುಡಿಯಿಂದ ರೈತರಿಗೆ ಸಂತಸ ಸುದ್ದಿ.

ಮಖಣಾಪುರ ಗ್ರಾಮದಲ್ಲಿ ಕಲ್ಲೂರಸಿದ್ದನ ಕಾರ್ಣಿಕ ಭವಿಷ್ಯವಾಣಿ

ಎನ್ ಡಿ ಎ ಮೈತ್ರಿಕೂಟ ಅಧಿಕಾರಕ್ಕೆ ಬಂದು ಮುಂದೆ ಮೈತ್ರಿಕೂಟದ ಪಕ್ಷದಲ್ಲಿ ಕಚ್ಚಾಟ ಆಗಲಿದೆ ಅಂತ ಕಾರ್ಣಿಕ ವಿಶ್ಲೇಷಣೆ. ಮಖಣಾಪುರ ಗ್ರಾಮದಲ್ಲಿ ಕಲ್ಲೂರಸಿದ್ದ ನುಡಿಯುವ ಕಾರ್ಣಿಕ ಸುಳ್ಳಾಗಿಲ್ಲ.