ಉ.ಕ ಸುದ್ದಿಜಾಲ ಬೆಳಗಾವಿ :

ತಾಳಿ ಕಟ್ಟುವ ಸಮಯದಲ್ಲಿ ‌ಮುರಿದು ಬಿದ್ದ ಮದುವೆ, ವರದಕ್ಷಿಣೆ ಡಿಮ್ಯಾಂಡ್ ಮಾಡಿದ ಸರ್ಕಾರಿ ನೌಕರ ಅರೇಸ್ಟ್ 100 ಗ್ರಾಂ ಚಿನ್ನ, 10 ಲಕ್ಷ ವರದಕ್ಷಿಣೆ ಡಿಮ್ಯಾಂಡ್ ಮಾಡಿದ ವರ.

ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಮದುವೆ ಸ್ಥಗಿತ. ವರ ವರದಕ್ಷಿಣೆಗೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಮದುವೆ ಸ್ಥಗಿತ. ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ 50 ಗ್ರಾಂ ಬಂಗಾರ,‌ ಒಂದು ಲಕ್ಷ ವರೋಪಚಾರ ನೀಡುವ ಮಾತುಕತೆ.

ಡಿ.30 2023ರ ಮದುವೆ ದಿನ 100 ಗ್ರಾಂ ಚಿನ್ನ, 10 ಲಕ್ಷ ವರದಕ್ಷಿಣೆ ನೀಡಲು ಬೇಡಿಕೆ. ‌ವರದಕ್ಷಿಣೆ ನೀಡದ ಹಿನ್ನೆಲೆಯಲ್ಲಿ ಮದುವೆ ಆಗಲ್ಲ ಎಂದಿದ್ದ ವರ. ಖಾನಾಪುರ ಪೊಲೀಸ ಠಾಣೆಯಲ್ಲಿ ವಧುವಿನಿಂದ ವರನ ವಿರುದ್ಧ ದೂರು ದಾಖಲು.

ಹುಬ್ಬಳ್ಳಿ ಮೂಲದ ವರ ಸಚಿನ್ ಪಾಟೀಲ್ ಬಂಧಿಸಿದ ಪೊಲೀಸರು. ಸದ್ಯ ಬೆಳಗಾವಿ ಡಿಸಿ ಕಚೇರಿಯಲ್ಲಿ ಎಸ.ಡಿ.ಎ ಆಗಿ ಕೆಲಸ ನಿರ್ವಹಣೆ. ಬೆಳಗಾವಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.