ಉ.ಕ ಸುದ್ದಿಜಾಲ ರಾಯಬಾಗ :

ಶಾಲಾ ಕೊಠಡಿ ಕೇಳಿದ ಶಿಕ್ಷಕನಿಗೆ ಶಿಕ್ಷೆ ನೀಡಿದ ಶಿಕ್ಷಣ ಇಲಾಖೆ. ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕೇಳಿದ್ದೆ ತಪ್ಪಾಯ್ತಾ ಶಾಲಾ ಶಿಕ್ಷಕನಿಗೆ..? ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರ ಸರಕಾರಿ ಶಾಲೆ ಶಿಕ್ಷಕನಿಗೆ ಅಮಾನತು ಮಾಡಿದ ಬಿಇಓ.

ಶಾಲೆಗೆ ಹೆಚ್ಚುವರಿ ಕೊಠಡಿಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಶಿಕ್ಷಕ ಅಮಾನತು. 4 ಕೊಠಡಿಗಳನ್ನು ಮಂಜೂರಾತಿ ಮಾಡುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದ್ದ ಶಿಕ್ಷಕ. ನಿಡಗುಂದಿ ಶಾಲೆಯಿಂದ ರಾಯಬಾಗ ಬಿಇಓ ಕಚೇರಿವರೆಗೆ ಪಾದಯಾತ್ರೆ ನಡೆಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಶಿಕ್ಷಕ ಅಮಾನತು.

9 ವರ್ಷಗಳಿಂದ ಮನವಿ ಮಾಡಿ ಕಂಗಾಲಾಗಿದ್ದ ಶಿಕ್ಷಕ. ಅಮಾನತುಗೊಂಡ ಶಾಲಾ ಶಿಕ್ಷಕ ವೀರಣ್ಣ ಮಡಿವಾಳರ. ದುರ್ವತನೆಯ ಆರೋಪದಡಿಯಲ್ಲಿ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಸಿದ ಬಿಇಓ. ರಾಯಬಾಗ ಬಿಇಓ ಬಸವರಾಜಪ್ಪನ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ.