ಉ.ಕ ಸುದ್ದಿಜಾಲ ಹುಬ್ಬಳ್ಳಿ :
ನಟೋರಿಯಸ್ ಕ್ರಿಮನಲ್ ಎರಡು ಕಾಲಿಗೆ ಗುಂಡೇಟು ರಾತ್ರೋರಾತ್ರಿ ಮನೆಗೆ ನುಗ್ಗಿ ಬಟ್ಟೆ ಬಿಚ್ಚಿ ಥಳಿಸುತ್ತಿದ್ದವನ ಕಾಲಿಗೆ ಗುಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಆರೋಪಿ ಶಿಫ್ಟ್.
ಫೈರಿಂಗ್ ವೇಳೆ ಪೊಲೀಸ್ ಸಿಬ್ಬಂದಿಗಳಿಗೂ ಗಾಯ ಕಿಮ್ಸ್ ಆಸ್ಪತ್ರೆಗೆ ಅವಳಿನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ ನಂತರ ಮಾಧ್ಯಮಗಳಿಗೆ ಕಮಿಷ್ನರ್ ಪ್ರತಿಕ್ರಿಯೆ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನವಲೂರಿನಲ್ಲಿ ವಿಕಾಸ್ ಕುಮಾರ್ ಎಂಬುವವರ ಮನೆ ದರೋಡೆಗೆ ಪ್ರಯತ್ನ ಪಟ್ಟಿದ್ದಾರೆ.
ವಿಕಾಸ್ ಕುಮಾರ್ ಎಸ್ ಡಿ ಎಂ ನಲ್ಲಿ ಮೆಡಿಕಲ್ ಸ್ಟಾಫ್ ಆಗಿ ಕೆಲಸ ಮಾಡ್ತಾರೆ ಹೊರವಲಯದಲ್ಲಿರುವ ಮನೆಗೆ ನುಗ್ಗಿದ ಡಕಾಯಿತರು ಘಟನೆ ನಡೆದ ಕೂಡಲೇ ರೌಂಡ್ಸ್ ನಲ್ಲಿದ್ದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಪಾಲಾ ವೆಂಕಟೇಶ್ವರ ಅಲಿಯಾಸ್ ಕಲ್ಯಾಣ್ ಕುಮಾರ್ ಎಂಬಾತ ಸೆರೆ ಸಿಕ್ಕಿದ್ದಾನೆ.
ವಿಚಾರಣೆ ವೇಳೆ ಇನ್ನು ಮೂರನಾಲ್ಕು ಜನ ಆತನೊಂದಿಗೆ ಬಂದಿದ್ದಾರೆ ಅನ್ನೋದು ತಿಳಿಸಿದ್ದಾನೆ. ಇಂಡಸ್ಟ್ರಿಯಲ್ ಏರಿಯಾದ ಗಾರ್ಡನ್ ಸುತ್ತಮುತ್ತ ಬೆಳಗಿನ ಜಾವದಲ್ಲಿ ಅವರು ಸೇರುವ ಮಾಹಿತಿ ಮೇರೆಗೆ ಹೋಗಿದ್ವಿ ಈ ವೇಳೆ ಏಕಾಯಕಿ ಹಲ್ಲೆ ಮಾಡಲು ಬಂದು ತಪ್ಪಿಸಿಕೊಂಡು ಹೋಗಲು ಪ್ರಯತ್ನ ಪಟ್ಟಿದ್ದ ಸ್ಥಳದಲ್ಲೇ ಇದ್ದ ಪಿಎಸ್ಐ ಪ್ರಮೋದ್ ಎರಡು ರೌಂಡ್ ಫೈರಿಂಗ್ ಮಾಡಿದ್ದಾರೆ.
ಎರಡು ಕಾಲಿಗೆ ಗುಂಡು ತಾಗಿ ಸ್ಥಳದಲ್ಲೇ ಬಿದ್ದಿದ್ದಾನೆ ಅಲ್ಲಿಂದ ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 6ನೇ ತಾರೀಕಿನಂದು ಇದೇ ವ್ಯಕ್ತಿ ಅಶೋಕ್ ಕದಂಬರ ಮನೆಗೆ ನುಗ್ಗಿ ಬಾಗಿಲು ಹೊಡೆದು ಥಳಿಸಿದ್ದರು.ಮನೆಯಲ್ಲಿದ್ದ ದಂಪತಿಗಳಿಗೂ ಕೂಡ ಹಲ್ಲೆ ಮಾಡಿದ್ದರು.
ಅದೇ ಪ್ರಕರಣ ಆರೋಪಿ ಅನ್ನೋದು ಕೂಡ ಈಗ ತಿಳಿದು ಬಂದಿದೆ. ನಮ್ಮ ರಾಜ್ಯ ಸೇರಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ 50 ಕ್ಕೆ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿ ಈತನ ಮೇಲೆ ಆಂಧ್ರದ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಪ್ರಕರಣ ದಾಖಲಾಗಿವೆ ಪಿಎಸ್ಐ ಪ್ರಮೋದ ಹಾಗೂ ಸಿಬ್ಬಂದಿ ಆನಂದ್ ಬಡಿಗೇರಗೆ ಸ್ವಲ್ಪ ಗಾಯವಾಗಿದೆ.
ಬೇರೆ ಆರೋಪಿಗಳ ಬಗ್ಗೆ ಕೂಡ ವಿಚಾರಣೆ ಮಾಡಲಾಗಿದೆ ಈತ ಮೂಲತಃ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯವನು. ಇವರು ವಂಶಾವಳಿಯಾಗಿ ದರೋಡೆಕೋರರು. ಇವರ ಅಪ್ಪ, ಅಜ್ಜ ಸೇರಿ ಎಲ್ಲರೂ ಸಂಪೂರ್ಣ ಡಕಾಯಿತಿ ಮಾಡ್ತಿದ್ರು