ಉ.ಕ ಸುದ್ದಿಜಾಲ ಕೊಪ್ಪಳ :

ಕೊಪ್ಪಳದ ಕವಲೂರು ಗ್ರಾಮದ ಬಳಿ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲಿಯೇ ಓರ್ವ ವಿದ್ಯಾರ್ಥಿ ಸಾವನಪ್ಪಿದ್ದು, ಇನ್ನೋರ್ವ ವಿದ್ಯಾರ್ಥಿಗೆ ಗಂಭೀರ ಗಾಯ.

ಸೈಕಲ್ ಮೇಲೆ ವಸತಿ ನಿಲಯಕ್ಕೆ ಹೊರಟಿದ್ದ ವಿದ್ಯಾರ್ಥಿಗಳು, ಕೆರೆಯ ಮಣ್ಣು ತುಂಬಿ ಯರ್ರಾಬಿರ್ರಿ ಓಡಿಸಿದ ಟ್ರ್ಯಾಕ್ಟರ್ ಚಾಲಕ. ಚಾಲಕನ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳ ಮೇಲೆ ಹರಿದ ಟ್ರ್ಯಾಕ್ಟರ್ ಕವಲೂರು ಗ್ರಾಮದ  ಭರತ್ (16) ಸಾವನ್ನಪ್ಪಿದ್ದು,  ಅಜಯ್(11) ಬಲಗೈಯಿಗೆ ಬಲವಾದ ಪೆಟ್ಟು ಬಿದಿದೆ.

ವಿದ್ಯಾರ್ಥಿಗಳು ಸೈಕಲ್ ಮೇಲೆ ಹಾಸ್ಟೆಲ್‌ಗೆ ತೆರಳುತ್ತಿರುವಾಗ ಈ‌ ಘಟನೆ ನಡೆದಿದೆ. ಈ ಕುರಿತು ಅಳವಂಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.