ಉ.ಕ ಸುದ್ದಿಜಾಲ ಚಿಕ್ಕಬಳ್ಳಾಪುರ :

ಹಾಡಹಗಲೇ ಮಚ್ಚಿನಿಂದ ವ್ಯಕ್ತಿಯೊರ್ವನ ಮೇಲೆ ಭೀಕರ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ‌.

ವಿವೇಕೆಂಡ್ ಕರ್ಪ್ಯೂ ದಿನದಂದು ಮರ್ಡರ್‌ಗೆ ಪ್ರಯತ್ನ ನಡೆದಿದ್ದು, ಮಚ್ಚಿನಿಂದ ಹಲ್ಲೆಗೊಳಗಾದ ವ್ಯಕ್ತಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪತ್ನಿಯೊಂದಿಗೆ ದ್ವಿಚಕ್ರವಾಹನದಲ್ಲಿ ಬರುವಾಗ ಮಚ್ಚಿನಿಂದ ಹಲ್ಲೆಗೈದ ದುಷ್ಕರ್ಮಿಗಳು.

ಹಲ್ಲೆಗೊಳಗಾದ ವ್ಯಕ್ತಿ ತಮಿಳುನಾಡು ಮೂಲದವನು. ಇತ ಚಿಕ್ಕಬಳ್ಳಾಪೂರ ತಾಲ್ಲೂಕಿನ ದಬರಗಾನಹಳ್ಳಿ ಗ್ರಾಮದಲ್ಲಿ‌ ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಎನ್ನಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಯುವರಾಜ ( 35) ವರ್ಷ ಎಂದು ತಿಳೊದು ಬಂದಿದೆ.