ಉ.ಕ ಸುದ್ದಿಜಾಲ ಗದಗ :
ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಮತನಾಡಿದ ಗೃಹ ಮಂತ್ರಿ ಜಿ.ಪರಮೇಶ್ವರ ವಿರುದ್ದ ಗದಗನಲ್ಲಿ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮ ಇದು ಸನಾತನ ಧರ್ಮ ಅಂತ ಹೇಳ್ತಾರೆ. ಇದು ಅತ್ಯಂತ ಪುರಾತನ ಧರ್ಮ ಆಗಿರೋದು ಸೂರ್ಯ ಯಾವಾಗ ಹುಟ್ಟಿದ ಅಂತ ಕೇಳಕ್ಕಾಗುತ್ತಾ? ಚಂದ್ರ ಸೂರ್ಯ ಭೂಮಿ ಯಾವಾಗ ಹುಟ್ಟಿತು ಅಂತ ಪ್ರಶ್ನೆ ಮಾಡಕ್ಕಾಗುತ್ತಾ? ಇದರ ಅರ್ಥ ಅವು ಅಸ್ತಿತ್ವದಲ್ಲೇ ಇಲ್ಲ ಎಂಬರ್ಥನಾ?.
ಸನಾತನ ಧರ್ಮ ಅತ್ಯಂತ ಪುರಾತನದಿಂದ ಬಂದಿದ್ದು ಅವತ್ತು ಜೀವಂತವಾಗಿದೆ, ಇವತ್ತು ಜೀವಂತವಾಗಿದೆ ಇಂತಹ ಧರ್ಮಕ್ಕೆ ವ್ಯಂಗ್ಯ ಮಾಡ್ತಿದ್ದೀರಾ, ಹಿಂದೂ ಧರ್ಮ ಇದ್ದುದ್ದಕ್ಕೆ ನೀವು ಬದುಕುತ್ತಿದ್ದೀರಿ ನೀವು ಗೃಹ ಸಚಿವರಾಗಿದ್ದೇ ಹಿಂದೂ ಧರ್ಮದಿಂದ ಬೇರೆ ಧರ್ಮ ಇದ್ದಿದ್ದರೆ ನೀವು ಮಂತ್ರಿ ಆಗ್ತಿರಲಿಲ್ಲ.
ನಿಮಗೆ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಬಗ್ಗೆ ಮಾತನಾಡುವ ಧೈರ್ಯ ಇದೇನಾ ನಾವು ತಾಳ್ಮೆಯಿಂದ ಇದ್ದೇವೆ ಅಂತ ಏನ್ ಬೇಕದ್ದು ಮಾತನಾಡೋದಾ? ವಾಕ್ ಸ್ವಾತಂತ್ರ್ಯ ಅಲ್ಲ ಇದು ಶ್ವೇಚಾಚಾರ ಅಂತ ಕರೆಯುತ್ತೇನೆ. ಹಿಂದೂ ಧರ್ಮದಲ್ಲಿ ಹುಟ್ಟಿ, ಹಿಂದೂ ಧರ್ಮದ ಬಗ್ಗೆ ಅವಮಾನ ಮಾಡಬೇಡಿ.
ಹೌದು ಧರ್ಮದಲ್ಲಿ ನ್ಯೂನ್ಯತೆಗಳಿವೆ ಅವುಗಳನ್ನ ಸರಿ ಮಾಡೋಣ, ಆದ್ರೆ ಹಿಂದೂ ಧರ್ಮ ನಾಶ ಮಾಡ್ತೇನೆ ಅಂದ್ರೆ ಆಗೋದಿಲ್ಲ ಎಂದು ಹೇಳಿದರು.